ವಿದ್ಯಾರ್ಥಿಗಳು ಶಿಕ್ಷಣ ಪಡೆದು ಸಾಧಕರಾಗಿ: ದಾನಿ ಕೀಲಾರ ಕುಮಾರ್ ಕಿವಿಮಾತು

Distribution of computers and printers
Published on

ಮಂಡ್ಯ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದರೆ ಸಾಧಕರಾಗಬಹುದು ಎಂದು ದಾನಿ ಕೀಲಾರ ಗ್ರಾಮದ ಕುಮಾರ್ ಹೇಳಿದರು.

ತಾಲೂಕಿನ ಜೋಡಿಹೊಡಾಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಕಂಪ್ಯೂಟರ್ ಮತ್ತು ಪ್ರಿಂಟರ್ ವಿತರಣೆ ಮಾಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಅಭ್ಯಾಸ ನಡೆಸಿದರೆ ಉನ್ನತ ಸ್ಥಾನ ಪಡೆಯಬಹುದು. ಈ ನಿಟ್ಟಿನಲ್ಲಿ ನಿಮ್ಮ ಕಠಿಣ ಪರಿಶ್ರಮ ಮುಖ್ಯ ಎಂದರು.

ಮಕ್ಕಳಿಗೆ ಯಾವುದೇ ಒತ್ತಡ ಹೇರದೆ ಪಾಲಕರು ನಿಮಗಾಗಿ ಕನಸುಗಳನ್ನು ಇಟ್ಟಿದ್ದಾರೆ. ಅದನ್ನು ನನಸು ಮಾಡಬೇಕು. ಪ್ರಸಕ್ತ ಸಾಲಿನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯ ಎರಡು ವರ್ಷದ ಪಿಯುಸಿ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚ ಭರಿಸುವುದಾಗಿ ಘೋಷಣೆ ಮಾಡಿದರು.

ದಾನಿ ಕೀಲಾರ ಶ್ರುತಿಕುಮಾರ್, ಪ್ರಭಾರಿ ಮುಖ್ಯ ಶಿಕ್ಷಕ ಕೆ.ಟಿ.ನಾರಾಯಣರಾಜೇ ಅರಸ್, ಸಹ ಶಿಕ್ಷಕರಾದ ಡಿ.ಎಸ್.ಕೃಷ್ಣೇಗೌಡ, ಕೆ.ಆರ್.ಶಶಿಧರ ಈಚಗೆರೆ, ಆರ್.ಚಂದ್ರಮತಿ, ಬಿ.ಸಿ.ಶಿಲ್ಪಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net