ವಿದ್ಯಾರ್ಥಿನಿಯರಿಗೆ ವಸ್ತ್ರ ವಿತರಣೆ

13 sep tnp 01
ಚಿದರವಳ್ಳಿ ಪ್ರೌಢಶಾಲೆಯಲ್ಲಿ ಶಿಕ್ಷಕ ಎನ್.ಶಂಕರಯ್ಯ ಶಾಲೆಯ ವಿದ್ಯಾರ್ಥಿನಿಯರಿಗೆ ಬಟ್ಟೆ ವಿತರಿಸಿದರು.ಗ್ರೇಸ್ ಪ್ರೇಮಕುಮಾರಿ, ಪ್ರಸಾದ್, ಯೋಗೇಶ್, ಚೇತನ್ ಇತರರಿದ್ದರು.
Published on

ತಿ.ನರಸೀಪುರ: ಶಿಕ್ಷಕರ ದಿನಾಚರಣೆ ಅಂಗವಾಗಿ ತಾಲೂಕಿನ ಚಿದರವಳ್ಳಿ ಪ್ರೌಢಶಾಲೆ ಶಿಕ್ಷಕ ಎನ್.ಶಂಕರಯ್ಯ ಅವರು ಗುರುವಾರ ಶಾಲೆಯ ವಿದ್ಯಾರ್ಥಿನಿಯರಿಗೆ ಬಟ್ಟೆ ವಿತರಿಸಿದರು.

ಬಳಿಕ ಮಾತನಾಡಿದ ಎನ್.ಶಂಕರಯ್ಯ, ಹೆಣ್ಣೊಂದು ಕಲಿತರೆ ಶಾಲೆ ತೆರೆದಂತೆ ಅನ್ನುವ ಹಾಗೆ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು. ನಾವು ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿರಲಿಲ್ಲ. ಈಗ ಎಲ್ಲ ಸೌಲಭ್ಯಗಳನ್ನು ಸಹ ಸರ್ಕಾರ ನೀಡುತ್ತಿದೆ. ಅದನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಕರೆ ನೀಡಿದರು. ಮಕ್ಕಳ ದಿನಾಚರಣೆಯಂದು ಬಾಲಕರಿಗೂ ಟೀ ಶರ್ಟ್ ವಿತರಣೆ ಮಾಡುವುದಾಗಿ ತಿಳಿಸಿದರು.

ಮುಖ್ಯ ಶಿಕ್ಷಕಿ ಗ್ರೇಸ್ ಪ್ರೇಮಕುಮಾರಿ, ಸಹ ಶಿಕ್ಷಕರಾದ ಪ್ರಸಾದ್, ದೈಹಿಕ ಶಿಕ್ಷಣ ಶಿಕ್ಷಕ ಯೋಗೇಶ್, ಚೇತನ್ , ಜನಾರ್ಧನ್, ರಾಮಚಂದ್ರ ನಾಯ್ಕ, ರಂಗಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಗುಮ್ಮಾಸ್ತ ಮಂಜಣ್ಣ, ನಾಗಮ್ಮ ಹಾಗೂ ಶಾಲೆಯ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net