ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ವಿತರಣೆ

12 gkp 001
ಮಾಯಮುಡಿ ಗ್ರಾಮ ಪಂಚಾಯಿತಿ ವತಿಯಿಂದ ನೀಡಲಾದ ಕುಡಿಯುವ ನೀರಿನ ಘಟಕವನ್ನು ಅಧ್ಯಕ್ಷ ಟಾಟು ಮೊಣ್ಣಪ್ಪ ಗ್ರಾಪಂ ಆವರಣದಲ್ಲಿ ಹಸ್ತಾಂತರಿಸಿದರು. ಶಾಂತಾ, ಸುಶೀಲಾ, ಸರಸ್ವತಿ, ಕೆ.ವಿ.ಸುಮಿತ್ರಾ, ಮುತ್ತಮ್ಮ, ಕೆ.ಕೆ.ಸುಮಿತ್ರಾ, ಎಂ.ಪಿ.ಮೀನಾ, ನಾಜೀರಾ, ರವಿ ಸದಪ್ಪ ಮೆಟ್ಟಲಕೋಡ್ ಇದ್ದರು.
Published on

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಮಾಯಮುಡಿ ಗ್ರಾಮ ಪಂಚಾಯಿತಿ ವತಿಯಿಂದ ಮೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಶುದ್ಧ ನೀರಿನ ಘಟಕ ಮತ್ತು ಡಿಸ್ಪೆನ್ಸರ್ ಹಾಗೂ 11 ಅಂಗನವಾಡಿ ಕೇಂದ್ರಗಳಿಗೆ ಶುದ್ಧ ನೀರಿನ ಘಟಕವನ್ನು ಗುರುವಾರ ವಿತರಿಸಲಾಯಿತು.

ಮಾಯಾಮುಡಿ ಗ್ರಾ.ಪಂ. ಅಧ್ಯಕ್ಷ ಎ.ಎಸ್.ಟಾಟು ಮೊಣ್ಣಪ್ಪ ಮಾತನಾಡಿ, ಮಕ್ಕಳಿಗೆ ಶುದ್ಧ ಕುಡಿಯುವ ನೀರು ನೀಡುವ ಉದ್ದೇಶದಿಂದ ವಾಟರ್ ಫಿಲ್ಟರ್ ನೀಡಲಾಗಿದೆ. ಆರೋಗ್ಯವಂತ ಸಮಾಜ ನಿರ್ಮಿಸುವ ಗುರಿಯನ್ನು ಗ್ರಾ.ಪಂ. ಹೊಂದಿದೆ. ಸ್ವಚ್ಛ ಪರಿಸರ, ಶುದ್ಧಗಾಳಿ, ನೀರು ಎಲ್ಲರಿಗೂ ಅತ್ಯವಶ್ಯಕ. ಶುದ್ಧಗಾಳಿ ಮತ್ತು ಶುದ್ಧ ನೀರಿನಿಂದ ಶೇ.80ರಷ್ಟು ರೋಗಗಳು ಬಾರದಂತೆ ತಡೆಗಟ್ಟಬಹುದು ಎಂದು ತಿಳಿಸಿದರು.

ಕುಡಿಯುವ ನೀರಿನ ಘಟಕದಿಂದ ಮಾಯಮುಡಿ ಗ್ರಾ.ಪಂ. ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ. ಸಾರ್ವಜನಿಕರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಮಾಯಮುಡಿ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ರಸ್ತೆಯ ಆಸುಪಾಸಿನಲ್ಲಿ ಕಸಗಳನ್ನು ಎಸೆದರೆ 5 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ಸದಪ್ಪ ಮೆಟ್ಟಲಕೋಡ್, ಉಪಾಧ್ಯಕ್ಷರಾದ ಶಾಂತಾ, ಸದಸ್ಯರಾದ ಸುಶೀಲಾ, ಸರಸ್ವತಿ, ಕೆ.ವಿ.ಸುಮಿತ್ರಾ, ಮುತ್ತಮ್ಮ, ಕೆ.ಕೆ.ಸುಮಿತ್ರಾ, ಎಂ.ಪಿ.ಮೀನಾ, ನಾಜೀರಾ, ಸಿ.ಕೆ.ಪೂವಯ್ಯ, ಎ.ಎಸ್.ನಾಚಯ್ಯ, ಟಿ.ಸಿ.ನಾರಾಯಣ, ಸಿದ್ದಪ್ಪ, ವಿನೋದ್ ಕುಮಾರ್, ಕೆ.ಕೆ.ಶಬರೀಶ್, ಸಿಬ್ಬಂದಿ ಆಶಾ, ಸಚಿತಾ, ಉಮೀರಾ, ಗುರು, ಅಭಿಷೇಕ್, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net