ಮೈಸೂರಿನಲ್ಲಿ ಕೆಆರ್‌ಎಂ ಫೌಂಡೇಷನ್‌ನಿಂದ ಜೇಡಿ ಮಣ್ಣಿನ ಗೌರಿ ಗಣೇಶ ಮೂರ್ತಿ ವಿತರಣೆ

Ganesha Murthy
Published on

ಮೈಸೂರು: ಕೆಆರ್‌ಎಂ ಫೌಂಡೇಷನ್ ವತಿಯಿಂದ ಅಗ್ರಹಾರದ ಶಂಕರಮಠ ರಸ್ತೆಯ ಮನೆ ಮನೆಗೆ ತೆರಳಿ ಮಂಗಳವಾರ ಉಚಿತವಾಗಿ ಜೇಡಿ ಮಣ್ಣಿನ ಗೌರಿ ಗಣೇಶ ಮೂರ್ತಿಗಳನ್ನು ವಿತರಣೆ ಮಾಡಲಾಯಿತು.

ಗಣೇಶೋತ್ಸವ ಮೂರ್ತಿಗಳನ್ನು ವಿತರಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎನ್.ಎಂ. ನವೀನ್ ಕುಮಾರ್, ಪ್ರಕೃತಿ ಮನುಷ್ಯನಿಗೆ ಬೇಕಾದ ಆಹಾರ ನೀರು ಮತ್ತು ಉಸಿರಾಡಲು ಉತ್ತಮಗಾಳಿ ನೀಡಿದೆ. ಆದರೆ ಮನುಷ್ಯ ದುರಾಸೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಗಿಡ ಮರಗಳನ್ನು ನಾಶ ಮಾಡುತ್ತಿರುವ ಪರಿಣಾಮ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ. ಈ ಬಾರಿಯ ಗೌರಿ ಗಣೇಶ ಹಬ್ಬವನ್ನು ನಾವು ಪರಿಸರ ಸ್ನೇಹಿಯಾಗಿ ಆಚರಿಸಬೇಕು. ಹಾಗಾಗಿ ಎಲ್ಲರು ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಎಂದು ಮನವಿ ಮಾಡಿದರು.

ಸುಜೀವ್ ಫೌಂಡೇಷನ್ ಅಧ್ಯಕ್ಷ ರಾಜಾರಾಮ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ನಗರದ ನಾಗರಿಕರಾದ ಜಿ. ರಾಘವೇಂದ್ರ, ಹರೀಶ್ ನಾಯ್ಡು, ಎಸ್.ಎನ್. ರಾಜೇಶ್, ವಿನಯ್ ಕಣಗಾಲ್, ರಾಜೇಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net