ಗುಳೇದಗುಡ್ಡ ಪಟ್ಟಣದಲ್ಲಿ ಮಂತ್ರಾಕ್ಷತೆ ವಿತರಣೆ

Distribution of charms in Guledagudda town
ಗುಳೇದಗುಡ್ಡದ ವಿಠ್ಠಲ ಮಂದಿರದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಮಂತ್ರಾಕ್ಷತೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
Published on

ಗುಳೇದಗುಡ್ಡ: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರದ ಗರ್ಭಗುಡಿಯಲ್ಲಿ ಜ.22ರಂದು ಪ್ರಾಣ ಪ್ರತಿಷ್ಠಾಪನೆ ನಡೆಯುವ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧೆಡೆ ವಿಶ್ವ ಹಿಂದು ಪರಿಷತ್‌ನ ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತರು ಮನೆ ಮನೆಗೆ ತೆರಳಿ ರಾಮ ಮಂದಿರದ ಫೋಟೋ ಮಂತ್ರಾಕ್ಷತೆ ಹಾಗೂ ಆಹ್ವಾನ ಪತ್ರ ವಿತರಿಸಿದರು.

ಜ.22ರಂದು ಮನೆ ಮುಂದೆ ಐದು ದೀಪ ಬೆಳಗಿಸಿ ದೀಪೋತ್ಸವ ಆಚರಿಸುವಂತೆ ಪರಿಷತ್‌ನ ಮಹಾದೇವ ಜಗಾತಾಪ ಮನವಿ ಮಾಡಿದರು.

ಪಟ್ಟಣದ 8ನೇ ವಾರ್ಡ್‌ನಲ್ಲಿಯ ವಿಠ್ಠಲ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಂತ್ರಾಕ್ಷತೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸಂಪತ್‌ಕುಮಾರ ರಾಠಿ, ಸಂಜು ಕಾರಕೂನ, ವಿಠ್ಠಲ ಪತ್ತಾರ, ಮುರಗೇಶ ರಾಜನಾಳ, ರಾಜು ಪತ್ತಾರ, ಪೀರಪ್ಪ ಕಂಠಿಗೌಡರ, ಮುತ್ತು ಚಿಕ್ಕನರಗುಂದ, ಮುತ್ತು ಮೊರಬದ, ರಾಜು ಚಿಕ್ಕನರಗುಂದ, ಸಿದ್ದು ನಾಯನೇಗಲಿ, ವಿಜಯ ಭಾವಿಕಟ್ಟಿ, ಮಹಾದೇವ ಗೌಳಿ, ರಾಚಣ್ಣ ತೊರಲಿ, ಶ್ರೀಕಾಂತ ದಯಮಾ, ಪ್ರಕಾಶ ಪಾಡಾ, ಅಭಿಷೇಕ ಕರಡಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net