ಕೇಂದ್ರ ಸರ್ಕಾರದ ಸಾಧನೆಯ ಕರಪತ್ರ ವಿತರಣೆ

EX MLA KAGERI
Published on

ಸಿದ್ದಾಪುರ: ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮುಂದಾಳತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ 9 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಾಧನೆಯ ಕರಪತ್ರ ವಿತರಿಸಿ ಕಾರ್ಯಕರ್ತರೊಂದಿಗೆ ಶನಿವಾರ ಸಂವಾದ ನಡೆಸಿದರು.

ಬಂಧಿಸರದ ಮಲ್ಲಿಕಾರ್ಜುನ ಗೌಡರ ಮನೆಯಲ್ಲಿ ಹಾಗೂ ಗೌರಿಗುಂಡಿಯ ಶಿವೇಶ್ವರಿ ಫಾಮರ್್​ನ ಮಾಲೀಕರಾದ ದಿವಾಕರ ಹೆಗಡೆ ಅವರ ಮನೆಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಹಾಗೂ ರೈತರೊಂದಿಗೆ ಸಂವಾದ ನಡೆಸಿ ಕೇಂದ್ರ ಸರ್ಕಾರದ ಯೋಜನೆಯನ್ನು ತಿಳಿಸಿದರು. ಕೇಂದ್ರಸರ್ಕಾರದ ಯೋಜನೆಯ ಮಾಹಿತಿಯನ್ನು ಜನಸಾಮಾನ್ಯರಿಗೆ ತಿಳಿಸುವುದರೊಂದಿಗೆ ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜನಸಾಮಾನ್ಯರಿಗೆ ತಿಳಿಸುವಂತೆ ಕಾಗೇರಿ ಹೇಳಿದರು.

ನಂತರ ಶಿರಳಗಿಯ ಶ್ರೀ ರಾಜಾರಾಮ ಚೈತನ್ಯ ಆಶ್ರಮಕ್ಕೆ ಭೇಟಿ ನೀಡಿ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿಯವರ ಆಶೀರ್ವಾದ ಪಡೆದು ಸಂವಾದ ನಡೆಸಿದರು. ಬಿಜೆಪಿ ತಾಲೂಕಾಧ್ಯಕ್ಷ ಮಾರುತಿ ಟಿ. ನಾಯ್ಕ ಹೊಸೂರು, ಜಿಲ್ಲಾ ಸಮಿತಿಯ ಗುರುರಾಜ ಶಾನಭಾಗ, ರಾಘವೇಂದ್ರ ಶಾಸ್ತ್ರಿ, ಮಮತಾ ಮಡಿವಾಳ, ಶ್ವೇತಾ ಆರ್. ನಾಯ್ಕ, ತಿಮ್ಮಪ್ಪ ಎಂ.ಕೆ., ಕೆ.ಆರ್. ವಿನಾಯಕ, ಸುಧೀರ ಗೌಡರ, ಸುರೇಶ ನಾಯ್ಕ, ಮಂಜುನಾಥ ಭಟ್ಟ, ವಿಜೇತ ಗೌಡರ್, ಗಣೇಶ ಭಂಡಾರಿ, ಶ್ರೀಕಾಂತ ಭಟ್ಟ, ಅಣ್ಣಪ್ಪ ನಾಯ್ಕ, ವಿಜಯ ಹೆಗಡೆ, ಆನಂದ, ಮಾರುತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net