ಪುಸ್ತಕ, ಕಲಿಕಾ ಸಾಮಗ್ರಿ ವಿತರಣೆ

bantakal
ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮ ನಡೆಯಿತು
Published on

ಶಿರ್ವ: ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಹಳೇ ವಿದ್ಯಾರ್ಥಿ ಉಮೇಶ್ ಸುಂದರ ಪಾಟ್ಕರ್ ಪೊದಮಲೆ ಕೊಡಮಾಡಿದ ನೋಟ್‌ಬುಕ್, ಬಂಟಕಲ್ಲು ಲಯನ್ಸ್ ಜಾಸ್ಮಿನ್ ಅವರಿಂದ ಸ್ಕೂಲ್ ಬ್ಯಾಗ್ ಮತ್ತು ಹಳೇ ವಿದ್ಯಾರ್ಥಿ ಸುಕುಮಾರ್ ಪ್ರಭು ಮಾನಿಪಾಡಿ ನೀಡಿದ ಕೊಡೆ ವಿತರಣೆ ಬುಧವಾರ ಜರುಗಿತು.

ಸಂಚಾಲಕ ಗಂಪದಬೈಲು ಜಯರಾಮ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ವಾರ್ಡ್ ಪ್ರತಿನಿಧಿ ಕೆ.ಆರ್.ಪಾಟ್ಕರ್, ಆಡಳಿತ ಮಂಡಳಿ ಅಧ್ಯಕ್ಷ ವಿಶ್ವನಾಥ್ ಪ್ರಭು, ದಾನಿಗಳಾದ ಸುಂದರ ಪಾಟ್ಕರ್ ಪೊದಮಲೆ, ಲಯನ್ಸ್ ಅಧ್ಯಕ್ಷೆ ಪ್ರಮೀಳಾ ಲೋಬೊ, ಜಯಲಕ್ಷ್ಮೀ ಸುಕುಮಾರ್ ಪ್ರಭು, ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನವೀನ್, ಎಸ್‌ಡಿಎಂಸಿ ಅಧ್ಯಕ್ಷ ರವೀಂದ್ರ ಪಾಟ್ಕರ್ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಸಂಗೀತಾ ಆರ್.ಪಾಟ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮೇಶ್ ಪ್ರಭು ಪಾಲಮೆ, ವನಿತಾ ಆರ್.ನಾಯಕ್, ರಮೇಶ್ಚಂದ್ರ ನಾಯಕ್, ಶಿಕ್ಷಕಿ ರೇಷ್ಮಾ ರಾಕೇಶ್, ನಾಗರತ್ನಾ, ಲಯನ್ಸ್ ಸದಸ್ಯರು, ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು. ಶಿಕ್ಷಕಿ ವಿನುತಾ ಸ್ವಾಗತಿಸಿದರು. ಶಾಲಿನಿ ಕಾರ್ಯಕ್ರಮ ನಿರೂಪಿಸಿದರು. ಸುಮತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net