ಶಿರಾಳಕೊಪ್ಪದಲ್ಲಿ ಭಾರತ್ ಅಕ್ಕಿ ವಿತರಣೆ

7srl1
ಶಿರಾಳಕೊಪ್ಪ ಪುರಸಭೆ ಎದುರು ಸಂಸದ ಬಿ.ವೈ.ರಾಘವೇಂದ್ರ ಜನರಿಗೆ ಭಾರತ್ ಅಕ್ಕಿ ವಿತರಿಸಿ ಯೋಜನೆಗೆ ಚಾಲನೆ ನೀಡಿದರು.
Published on

ಶಿರಾಳಕೊಪ್ಪ: ಬರಗಾಲ ಸಂದರ್ಭದಲ್ಲೂ ದೇಶದ ಜನರಿಗೆ ಆಹಾರದ ಸಮಸ್ಯೆ ಎದುರಾಗಬಾರದೆಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತ್ ಅಕ್ಕಿ ಯೋಜನೆಯಡಿ ಪ್ರತಿ ಹಳ್ಳಿ, ಪಟ್ಟಣಗಳಿಗೆ ಕಡಿಮೆ ದರದಲ್ಲಿ ಅಕ್ಕಿ ವಿತರಿಸುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಪಟ್ಟಣದ ಪುರಸಭೆ ಎದುರು ಗುರುವಾರ ಅಕ್ಕಿ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ದೇಶದಲ್ಲಿ ಯಾರೂ ಹಸಿವಿನಿಂದ ಬಳಲಬಾರದೆಂದು ದೇಶಾದ್ಯಂತ ಕೆ.ಜಿಗೆ 29 ರೂ.ನಂತೆ 10 ಕೆ.ಜಿ ಭಾರತ್ ಅಕ್ಕಿಯನ್ನು ನೀಡಲಾಗುತ್ತಿದೆ ಎಂದರು. ನಗರ ಬಿಜೆಪಿ ಅಧ್ಯಕ್ಷ ಚೆನ್ನವೀರಶೆಟ್ಟಿ, ಇಂದೂಧರ, ಎಚ್.ಎಂ.ಚಂದ್ರಶೇಖರ, ರಾಘವೇಂದ್ರ, ನವೀದ್, ಮಂಜು ಜಿಲೇಬಿ, ರಂಜನ್ ಭಂಡಾರಿ, ಚಂದ್ರಶೇಖರ ಮಂಚಾಲಿ ಸೇರಿ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net