ಹಾಸನಾಂಬ ಲಯನ್ಸ್ ಕ್ಲಬ್‌ನಿಂದ ಬಾಗಿನ ವಿತರಣೆ

ಹಾಸನಾಂಬ ಲಯನ್ಸ್ ಕ್ಲಬ್‌ನಿಂದ ಬಾಗಿನ ವಿತರಣೆ
Published on

ಹಾಸನ: ನಗರದ ಕುವೆಂಪು ನಗರದಲ್ಲಿರುವ ಲಯನ್ಸ್ ಕ್ಲಬ್ ಕೇಂದ್ರ ಕಚೇರಿಯಲ್ಲಿ ಹಾಸನಾಂಬ ಲಯನ್ಸ್ ಕ್ಲಬ್ ವತಿಯಿಂದ ಸರ್ವ ಸದಸ್ಯರ ಸಾಮಾನ್ಯ ಸಭೆ, ಹೊಸ ಮತ್ತು ಲಿಯೋ ಸದಸ್ಯರಿಗೆ ಉಪನ್ಯಾಸ ಹಾಗೂ ಗೌರಿ ಗಣೇಶ ಹಬ್ಬದ ಪ್ರಯುಕ್ತ ಬಾಗಿನ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಮಾಜಿ ಪ್ರಾಂಥಪಾಲ ಡಾ.ಎಚ್.ಎಸ್.ಮಂಜುನಾಥ್ ಮೂರ್ತಿ, ಸದಸ್ಯರಿಗೆ ಉಪನ್ಯಾಸ ನೀಡಿ, ಲಯನ್ಸ್ ಕ್ಲಬ್‌ಗೆ ಸೇವೆ ಮಾಡುವ ಮನೋಭಾವ ಉಳ್ಳವರು ಬರುತ್ತಾರೆ. ಇಂದು ನಾವು ಮಾಡಿದ ಸಹಕಾರ ಮುಂದೊಂದು ದಿನ ಫಲ ನೀಡುತ್ತದೆ. ಜೀವನದಲ್ಲಿ ಪ್ರತಿಯೊಬ್ಬರೂ ಸೇವಾ ಮನೋಭಾವ ಹೊಂದಿರಬೇಕು ಎಂದರು.

ಗೌರಿ-ಗಣೇಶ ಹಬ್ಬದ ಪ್ರಯುಕ್ತ ಹಾಸನಾಂಬ ಲಯನ್ಸ್ ಕ್ಲಬ್ ಮಹಿಳಾ ಸದಸ್ಯರಿಗೆ ಬಾಗಿನ ಅರ್ಪಿಸಲಾಯಿತು. ಹಾಸನಾಂಬ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಕೆ.ಮೋಹನ್ ಕುಮಾರ್, ಖಜಾಂಚಿ ಎಂ.ಹರೀಶ್ ಕುಮಾರ್, ಎಚ್.ಕೆ.ನಾಗೇಶ್, ಪ್ರಾಂತೀಯ ಅಧ್ಯಕ್ಷ ಕೇಶವಮೂರ್ತಿ, ಅಸೋಸಿಯೇಟ್ ಕ್ಯಾಬಿನೆಟ್ ತಿಮ್ಮರಾಯಶೆಟ್ಟಿ, ಅಂಬಾಸೀಡರ್ ಕೃಷ್ಣಶೆಟ್ಟಿ, ಕೆ.ಆರ್.ಮಮತೇಶ್, ಪ್ರಕಾಶ್ ಯಾಜಿ, ಎಂ.ಎಚ್.ಮಂಜುನಾಥ್, ಎಚ್.ಎಸ್.ಶಿವಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net