ಜೀವಧಾರ ಜನಸೇವಾ ಕೇಂದ್ರದಿಂದ ಜನರಿಗೆ ಆಯುಷ್ಮಾನ್ ಕಾರ್ಡ್ ವಿತರಣೆ

15
Published on

ಮೈಸೂರು: ಮಂಡಿ ಮೊಹಲ್ಲಾದ 24ನೇ ವಾರ್ಡಿನ ನಾಗರಿಕರಿಗೆ ಜೀವಧಾರ ಜನಸೇವಾ ಕೇಂದ್ರದಿಂದ ಉಚಿತವಾಗಿ ಆಯುಷ್ಮಾನ್ ಕಾರ್ಡ್ ವಿತರಿಸಲಾಯಿತು.
ಈ ವೇಳೆ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ಬಡತನವು ಆರೋಗ್ಯಕ್ಕೆ ಅಡ್ಡಿಯಾಗಬಾರದು. ಪ್ರತಿಯೊಬ್ಬರಿಗೂ ಉಚಿತವಾಗಿ ಚಿಕಿತ್ಸೆ ನೀಡುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜತೆಯಾಗಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೊಳಿಸಿದ್ದು, ಇದರ ಲಾಭವನ್ನು ಅರ್ಹ ಫಲಾನುಭವಿಗಳು ಪಡೆಯಬೇಕು ಎಂದು ಕೋರಿದರು.
ಯೋಜನೆಯ ಕಾರ್ಡ್ ಹೊಂದಿದವರಿಗೆ ಆಸ್ಪತ್ರೆಗಳಲ್ಲಿ ಉಚಿತವಾಗಿ ವೈದ್ಯಕೀಯ ಸೇವೆ ದೊರೆಯಲಿದೆ. ಯೋಜನೆ ವರದಾನವಾಗಿದೆ. ಜೀವಧಾರ ಜನಸೇವಾ ಕೇಂದ್ರದಿಂದ ಯೋಜನೆಯಡಿ 24ನೇ ವಾರ್ಡಿನ ಪ್ರತಿ ಮನೆಗೂ ಅರ್ಹರ ಹೆಸರು ನೋಂದಣಿ ಹಾಗೂ ಸ್ಮಾರ್ಟ್‌ಕಾರ್ಡ್ ವಿತರಣೆ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಚಾಮರಾಜ ಕ್ಷೇತ್ರದ ಹಿಂದುಳಿದ ವರ್ಗದ ಅಧ್ಯಕ್ಷ ಸೂರಜ್, 24ನೇ ವಾರ್ಡಿನ ಬಿಜೆಪಿ ಅಧ್ಯಕ್ಷ ಕೇಬಲ್ ವಿಜಿ, ಬಿಜೆಪಿ ಚಾಮರಾಜ ಕ್ಷೇತ್ರದ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ಮನ್ ಕಿ ಬಾತ್ ಸಂತೋಷ್, ಮುಖಂಡರಾದ ಸುರೇಂದ್ರ, ರವೀಂದ್ರನಾಥ್, ತೇಜಾವತಿ ಬಾಯ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net