ಮನೆಗಳಿಗೆ ಅಯೋಧ್ಯೆ ಮಂತ್ರಾಕ್ಷತೆ ವಿತರಣೆ

04sunti01
Published on


ಕೊಡಗು : ಸುಂಟಿಕೊಪ್ಪ ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಪವಿತ್ರ ಮಂತ್ರಾಕ್ಷತೆಯನ್ನು ಶುಕ್ರವಾರ ಸುಂಟಿಕೊಪ್ಪದ ಮನೆ ಮನೆಗಳಿಗೆ ವಿತರಿಸಲಾಯಿತು.


ಗ್ರಾಮದ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರಿಗೆ ಪವಿತ್ರ ಮಂತ್ರಾಕ್ಷತೆಯನ್ನು ಶ್ರದ್ಧಾ ಭಕ್ತಿಯಿಂದ ವಿತರಿಸಲಾಯಿತು. ಜ.22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಹಿಂದು ಕಾರ್ಯಕರ್ತರು ಮನವಿ ಮಾಡಿದರು.

ಆರ್‌ಎಸ್‌ಎಸ್ ಕಾರ್ಯಕರ್ತ ರಾಕೇಶ್, ವೇಲುಮುರುಗನ್, ಸಂಘ ಪರಿವಾರದ ಪೃಥ್ವಿರಾಜ್, ಮನು ಅಚ್ಚಮಯ್ಯ, ವಿಜಯ್, ದರ್ಶನ್, ತ್ರಿಜಲ್, ಸಂತೋಷ್, ಬಿಜೆಪಿ ಮುಖಂಡರಾದ ಸುದೀಶ್, ಬಿ.ಕೆ.ಪ್ರಶಾಂತ್, ಲೀಲಾವತಿ, ಸಂದೀಪ್, ಪಿ.ಆರ್.ಸುನೀಲ್‌ಕುಮಾರ್ ಇತರರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net