

ಚಿಟಗುಪ್ಪ: ಬಿಜೆಪಿ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಪಕ್ಷದ ಜಿಲ್ಲಾ ಕಾನೂನು ಪ್ರಕೋಷ್ಠದ ನೂತನ ಸದಸ್ಯರು ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ರಾಜ್ಯ ಮುಖಂಡರಾದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಸಲಹೆ ನೀಡಿದರು.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಕಾನೂನು ಪ್ರಕೋಷ್ಠ ಜಿಲ್ಲಾ ಸಂಚಾಲಕ ಶಿವಕುಮಾರ ಮಾಲಿಪಾಟೀಲ್ ಬೇಮಳಖೇಡ ನೇತೃತ್ವದಲ್ಲಿ ರಚನೆಯಾದ ಜಿಲ್ಲಾ ಸಮಿತಿ ಸದಸ್ಯರಿಗೆ ನೇಮಕಪತ್ರ ಹಸ್ತಾಂತರಿಸಿ ಮಾತನಾಡಿದ ಅವರು, ಪಕ್ಷದ ಎಲ್ಲ ಘಟಕಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದರ ಜತೆಗೆ ಸಂಘಟನೆಗೆ ಮುಂದಾಗಬೇಕು. ಸದಸ್ಯತ್ವ ಅಭಿಯಾನದಲ್ಲಿ ಹೆಚ್ಚೆಚ್ಚು ಸದಸ್ಯರ ನೋಂದಣಿ ಮಾಡಬೇಕು ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ಪಕ್ಷದ ಸಂಘಟನೆ ಬೆಳೆಸಲು ಕೋರಿದರು.
ಪ್ರಕೋಷ್ಠ ಜಿಲ್ಲಾ ಸಂಚಾಲಕ ಶಿವಕುಮಾರ ಮಾಲಿಪಾಟೀಲ್ ಪ್ರಾಸ್ತಾವಿಕ ಮಾತನಾಡಿ, ಪಕ್ಷ ಮತ್ತು ವರಿಷ್ಠರ ಆದೇಶದಂತೆ ಸಂಘಟನೆಗೆ ಎಲ್ಲ ಸದಸ್ಯರೊಂದಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ಹಿರಿಯ ಮುಖಂಡರಾದ ಗುರುನಾಥ ಜಾಂತಿಕರ, ಜಯಕುಮಾರ ಕಾಂಗೆ, ಸಂಜುಕುಮಾರ ಸಜ್ಜನ್, ಪೀರಪ್ಪ ಯರನಳ್ಳಿ, ಕಿರಣ ಪಾಟೀಲ್, ನಾಗೇಂದ್ರ ಬಿರಾದಾರ ಇತರರಿದ್ದರು.
ಪದಾಧಿಕಾರಿಗಳ ನೇಮಕ: ಬಿಜೆಪಿ ಕಾನೂನು ಪ್ರಕೋಷ್ಠದ ಜಿಲ್ಲಾ ಸದಸ್ಯರಾಗಿ ಸಂಗಮೇಶ ಗಂಗಶೆಟ್ಟಿ ಪಾಟೀಲ್, ಪ್ರಕಾಶ ವೀರಸಂಗಪ್ಪ, ರಾಹುಲ್ ಅಶೋಕರಾವ ಸಾವಳೆ, ಹೇಮಲತಾ ಸಂಜಯಕುಮಾರ, ರೇಣುಕಾ ರಾಜಕುಮಾರ ಮಠಪತಿ, ಸುನೀಲಕುಮಾರ ಚಂದ್ರಪ್ಪ ಸೋನೆ, ಶರತಚಂದ್ರ ಸ್ವಾಮಿ, ಶಿವರಾಜ ಖೇಮಶೆಟ್ಟಿ, ಸಂದೀಪ ಮೇತ್ರೆ ನೇಮಕಗೊಂಡಿದ್ದಾರೆ.