ಖಾಸಗಿ ಬಸ್ ಪಾಸ್‌ಗೆ ಅರ್ಜಿ ವಿತರಣೆ

arji
Published on

ಕುಂದಾಪುರ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಎಕ್ಸ್‌ಪ್ರೆಸ್ ಹಾಗೂ ಸರ್ವೀಸ್ ಬಸ್‌ಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಕೆನರಾ ಬಸ್ ಮಾಲೀಕರ ಸಂದಿಂದ ನೀಡುವ 2025-26ನೇ ಸಾಲಿನ ಶೇ.50 ರಿಯಾಯಿತಿಯ ವಿದ್ಯಾರ್ಥಿ ಬಸ್ ಪಾಸ್‌ಗಳ ಅರ್ಜಿ ವಿತರಣೆ ಪ್ರಾರಂಭಗೊಂಡಿದೆ.

ಸಂದ ಕಚೇರಿಗಳಾದ ಮಂಗಳೂರು, ಪಡುಬಿದ್ರೆ, ಉಡುಪಿ, ಕುಂದಾಪುರ, ಕಾರ್ಕಳ, ಮೂಡುಬಿದಿರೆ, ಕಿನ್ನಿಗೋಳಿ, ಹಿರಿಯಡಕ, ಹೆಬ್ರಿ, ಸಿದ್ದಾಪುರ, ಬೈಂದೂರು, ಹಾಲಾಡಿ ಕೇಂದ್ರದಲ್ಲಿ ಅರ್ಜಿ ಪಡೆದು ಸೂಕ್ತ ದಾಖಲೆ ನೀಡಿ ವಿದ್ಯಾರ್ಥಿಗಳು ಬಸ್‌ಪಾಸ್ ಪಡೆದುಕೊಳ್ಳಬಹುದು. ಹೆಚ್ಚಿನ ವಾಹಿತಿಗೆ ದೂರವಾಣಿ ಸಂಖ್ಯೆ 7259018002 ಅಥವಾ 08202521211 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net