ಕಾರ್ಕಳ ಮೈನ್ ಶಾಲೆಗೆ ಪರಿಕರ ವಿತರಣೆ

school-1
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಮೈನ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಕೊಡೆ, ಬ್ಯಾಗ್ ವಿತರಿಸಲಾಯಿತು.
Published on

ಕಾರ್ಕಳ: ಕಾರ್ಕಳ ಮೈನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಕೊಡೆ, ಬ್ಯಾಗ್ ವಿತರಣಾ ಕಾರ್ಯಕ್ರಮ ಇತ್ತಿಚೇಗೆ ನಡೆಯಿತು. ನಿಟ್ಟೆ ಎಜುಕೇಶನ್ ಟ್ರಸ್ಟ್ ಮತ್ತು ನಿಟ್ಟೆ ರೋಟರಿ ಕ್ಲಬ್‌ನಿಂದ ನೋಟ್‌ಬುಕ್, ಬೋಳಾ ಸುರೇಂದ್ರ ಕಾಮತ್ ಮೆಮೊರಿಯಲ್ ಚಾರಿಟೆಬಲ್ ಟ್ರಸ್ಟ್ ಮತ್ತು ಅಮ್ಮನ ನೆರವು ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕೊಡೆ ಮತ್ತು ನೋಟ್‌ಬುಕ್ ಹಾಗೂ ಕಾರ್ಕಳ ಮಹಾದೇವ ಗಾರ್ಮೆಂಟ್ಸ್ ವತಿಯಿಂದ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.

ಬಿ.ಆರ್.ಸಿ ಕೋ ಆರ್ಡಿನೇಟರ್ ಸಂತೋಷ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಅಮ್ಮನ ನೆರವು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಅವಿನಾಶ್ ಜಿ. ಶೆಟ್ಟಿ ವಿದ್ಯಾರ್ಥಿಗಳಿಗೆ ಕೊಡೆ ಮತ್ತು ನೋಟ್‌ಬುಕ್ ವಿತರಿಸಿದರು. ಉದ್ಯಮಿ ರಾಜೇಶ್ ಮತ್ತು ಗೌರವ್ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿದರು.
ಎಸ್‌ಡಿಎಂಸಿ ಅಧ್ಯಕ್ಷೆ ಮಾಲಾಶ್ರೀ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಪುರಸಭೆ ಸದಸ್ಯೆ ಸುಮಾ ಕೇಶವ್, ಪುರಸಭಾ ಸದಸ್ಯ ಪ್ರದೀಪ್ ರಾಣೆ, ಪುರಸಭೆ ಸದಸ್ಯೆ ಭಾರತಿ ಅಮಿನ್, ಎಸ್‌ಡಿಎಂಸಿ ಉಪಾಧ್ಯಕ್ಷ ಪರಸಪ್ಪ ಜೋಗಿನ, ಶಿಕ್ಷಕಿಯರಾದ ಮಧುಶ್ರೀ, ಪೂಜಾ, ಎಸ್‌ಡಿಎಂಸಿ ಸದಸ್ಯರು, ಪಾಲಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶಶಿಕಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವೀಧರ ಸಹ ಶಿಕ್ಷಕಿ ಪ್ರತಿಮಾ ದೇವದಾಸ್ ಸ್ವಾಗತಿಸಿ, ಶಿಕ್ಷಕಿ ಅಶ್ವಿನಿ ನಿರೂಪಿಸಿದರು. ಶ್ರೇಯಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net