ಶಾಂತಿವನ ಟ್ರಸ್ಟ್‌ನಿಂದ ಮಕ್ಕಳಿಗೆ 16 ಲಕ್ಷ ಪುಸ್ತಕಗಳ ವಿತರಣೆ

6 nrp 4
Published on

ಎನ್.ಆರ್.ಪುರ: ಧರ್ಮಸ್ಥಳದ ಯೋಗ ಮತ್ತು ನೈತಕ ಶಿಕ್ಷಣ ಯೋಜನೆಯಡಿ ಶಾಂತಿವನ ಟ್ರಸ್ಟ್ ನಿಂದ 30 ವರ್ಷದಿಂದ 16 ಲಕ್ಷ ಪುಸ್ತಕಗಳನ್ನು ವಿತರಿಸಲಾಗಿದೆ ಎಂದು ಧರ್ಮಸ್ಥಳದ ಶಾಂತಿವನ ಟ್ರಸ್ಟ್ ನ ಮುಖ್ಯಸ್ಥ ಶಶಿಕಾಂತ್‌ಜೈನ್ ಹೇಳಿದರು.

ಸಿಂಹನಗದ್ದೆ ಬಸ್ತಿಮಠದಲ್ಲಿ ಧರ್ಮಸ್ಥಳದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ಶಾಂತಿವನ ಟ್ರಸ್ಟ್‌ನಿಂದ ಜಿಲ್ಲಾ ಮಟ್ಟದ 5 ರಿಂದ 10 ನೇ ತರಗತಿ ಮಕ್ಕಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ದ ಮಾತನಾಡಿ, ಎಲ್ಲ ಮಕ್ಕಳಿಗೂ ಸಂಸ್ಕಾರ ನೀಡಬೇಕು ಎಂಬುವುದು ಈ ಸ್ಪರ್ಧೆಗಳ ಉದ್ದೇಶ ಎಂದರು.

ಪ್ರಾಥಮಿಕ ಶಾಲಾ ಮಕ್ಕಳಿಗೆ ಜ್ಞಾನ ದರ್ಶನಿ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಜ್ಞಾನವರ್ಷಿಣಿ ಎಂಬ ಪುಸ್ತಕಗಳನ್ನು ಮೊದಲು ನೀಡಿರಲಾಗುತ್ತದೆ. ಪುಸ್ತಕದಲ್ಲಿ ಇರುವ ವಿಷಯಗಳ ಬಗ್ಗೆ ಪ್ರಬಂಧ ಸ್ಪರ್ಧೆ, ಶ್ಲೋಕ ವಾಚನ ಸ್ಪರ್ಧೆ,ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆ ನಡೆಸಲಾಗುತ್ತದೆ. ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸ್ಪರ್ಧೆ ಮುಗಿಸಲಾಗಿದೆ. ಅಲ್ಲಿ ಗೆದ್ದವರು ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ತಿಳಿಸಿದರು.

ತಾಲೂಕು ಬಡ್ತಿ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್ ಮಾತನಾಡಿ, ಇಂದಿನ ಶಿಕ್ಷಣದಲ್ಲಿ ನೈತಿಕತೆ ಅಗತ್ಯವಾಗಿದೆ. ಆತ್ಮ ತೃಪ್ತಿಗಾಗಿ, ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಬದುಕಲು ನೈತಿಕತೆ ಅಗತ್ಯ ಎಂದರು.

ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸೇವ್ಯಾನಾಯಕ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ರಾಜಾನಾಯಕ್, ಇ.ಸಿ.ಓ.ರಂಗಪ್ಪ , ಆರ್.ನಾಗರಾಜ್, ಗುಣಪಾಲ್ ಜೈನ್, ತಿಮ್ಮೇಶಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net