ಸದಸ್ಯರಿಗೆ ಶೇ.10 ರಷ್ಟು ಲಾಭಾಂಶ ವಿತರಣೆ

sri-2 (9)
Published on

ಶೃಂಗೇರಿ: ಶ್ರೀ ವಿದ್ಯಾಶಂಕರ ಸೌಹಾರ್ದ ಸಹಕಾರಿ ಸಂಘ15 ವರ್ಷಗಳಿಂದ ಸಾರ್ವಜನಕಿಕರ ಸೇವೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಸದಸ್ಯರ ಅಪೇಕ್ಷೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ತಿಳಿಸಿದರು.

ವಿದ್ಯಾಭಾರತೀ ಸಭಾಂಗಣದಲ್ಲಿ ಶ್ರೀವಿದ್ಯಾಶಂಕರ ಸೌಹಾರ್ದ ಸಹಕಾರಿ ನಿಯಮಿತದ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿ ವರ್ಷ ಲಾಭ ಹೆಚ್ಚಿಸಿಕೊಂಡ ಸಂಸ್ಥೆ ಸದಸ್ಯರಿಗೆ ಅಗತ್ಯವಿರುವ ಸಾಲ ಸೌಲಭ್ಯ ಮತ್ತು ಇ-ಸ್ಟಾಂಪ್ ಸೇವೆ ನೀಡಲಾಗುತ್ತಿದೆ. ಪ್ರಸ್ತುತ 583 ಸದಸ್ಯರನ್ನು ಒಳಗೊಂಡ ಸಂಸ್ಥೆ 9.74 ಲಕ್ಷ ರೂ. ಷೇರು ಬಂಡವಾಳ 4.70 ಲಕ್ಷ ರೂ. ದುಡಿಯುವ ಬಂಡವಾಳ ಹೊಂದಿದೆ. ಪ್ರಸ್ತುತ ಸಾಲಿನಲ್ಲಿ ಸದಸ್ಯರಿಗೆ ಶೇಕಡಾ 10ರಷ್ಟು ಲಾಭಾಂಶ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಸಂಘದ ಸರ್ವತೋಮುಖ ಅಭಿವೃದ್ಧಿಗೆ ಅಡಳಿತ ಮಂಡಳಿ ನೀಡುತ್ತಿರುವ ಪ್ರಾಮಾಣಿಕ ಸಹಕಾರ ಅನನ್ಯ. ಕೊಪ್ಪ ತಾಲೂಕಿನ ಸದಸ್ಯರು ಸ್ವಯಂ ಪ್ರೇರಿತರಾಗಿ ಸದಸ್ಯತ್ವ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಉಪಾಧ್ಯಕ್ಷ ರಮೇಶ್, ನಿರ್ದೇಶಕರಾದ ತ್ಯಾಗರಾಜ್,ಕುಮಾರಸ್ವಾಮಿ ಬೆಟ್ಟಗದ್ದೆ, ಭಾಸ್ಕರ್,ಬಾಲಕೃಷ್ಣ. ಕೆ.ಜಿ, ಹರಿಕೆ ನಾಗಭೂಷಣ್,ವಿಜಯಲಕ್ಷ್ಮೀ. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net