ಪತ್ರಕರ್ತರಿಗೆ ದಿನಸಿ ಕಿಟ್ ವಿತರಣೆ

4
Published on

ಮೈಸೂರು: ಮೈಸೂರು ನಾಗರಿಕ ವೇದಿಕೆ ವತಿಯಿಂದ ಪತ್ರಕರ್ತರಿಗೆ ದಿನಸಿ ಕಿಟ್‌ಗಳನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ನಗರದ ಸುತ್ತೂರು ಮಠದಲ್ಲಿ ಶನಿವಾರ ವಿತರಿಸಿದರು.

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತಿರುವ ಪತ್ರಕರ್ತರಿಗೆ ಅನುಕೂಲವಾಗಲೆಂದು ಆಹಾರ ಧಾನ್ಯಗಳನ್ನು ಒಳಗೊಂಡ 174 ಕಿಟ್‌ಗಳನ್ನು ವಿತರಿಸಲಾಯಿತು.

400 ಕುಟುಂಬಗಳಿಗೆ ಇದನ್ನು ನೀಡಲಾಗುತ್ತಿದೆ. ತಾಲೂಕು ಕೇಂದ್ರಗಳ ಪ್ರತಿನಿಧಿಗಳಿಗೆ ಅಲ್ಲಿಯೇ ವಿತರಿಸಲಾಗುತ್ತದೆ. ಪ್ರತಿಯೊಂದು ಕಿಟ್‌ನಲ್ಲಿ ತಲಾ ಒಂದು ಕೆಜಿ ಉಪ್ಪು, ಬೇಳೆ, ಸಕ್ಕರೆ, ರವೆ, 1/2 ಕೆ.ಜಿ. ಕಡ್ಲೆಬೇಳೆ, ತಲಾ 1/4 ಕೆ.ಜಿ. ಟೀಪುಡಿ, ಸಾಂಬಾರ್‌ಪುಡಿ, ಜೀರಿಗೆ, ತಲಾ 100 ಗ್ರಾಂ ಅರಿಶಿಣ ಪುಡಿ, ಮೆಣಸು ಇದೆ.

ಬಳಿಕ ಮಾತನಾಡಿದ ಸುತ್ತೂರುಶ್ರೀಗಳು, ಕೋವಿಡ್ ನಿಯಂತ್ರಣಕ್ಕೆ ವಿಶ್ವಾದ್ಯಂತ ಹೋರಾಟ ನಡೆಯುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಸೋಂಕು ಕೂಡ ತ್ವರಿತಗತಿಯಲ್ಲಿ ಹರಡುತ್ತಿದೆ. ಆದರೆ ವೈದ್ಯರು ಹಾಗೂ ವಿಜ್ಞಾನಿಗಳ ಪ್ರಕಾರ ಇತರ ಎಲ್ಲ ವೈರಾಣುವಿನಂತೆ ಕರೊನಾ ಕೂಡ ಒಂದು ಅಷ್ಟೇ. ಹೀಗಾಗಿ ಆತಂಕಪಡುವ ಅಗತ್ಯ ಇಲ್ಲ ಎಂದರು.

ಸರ್ಕಾರ, ವಿಜ್ಞಾನಿಗಳು ಹಾಗೂ ವೈದ್ಯರ ಸಲಹೆಯನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಸೋಂಕು ಮತ್ತಷ್ಟು ಹರಡುವುದಕ್ಕೆ ಅವಕಾಶ ನೀಡಬಾರದು. ಸೆಪ್ಟೆಂಬರ್ ಅಂತ್ಯದವರೆಗೂ ಕೋವಿಡ್ ಪ್ರಕರಣಗಳು ಏರುತ್ತಲೇ ಇರುತ್ತವೆ ಎಂಬ ಸೂಚನೆಗಳಿವೆ. ಬಳಿಕ ಸಹಜ ಸ್ಥಿತಿ ನಿರ್ಮಾಣವಾಗಲಿದೆ ಎಂದರು.

ಶ್ರೀಜಯರಾಜೇಂದ್ರ, ಜೆಎಸ್‌ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ನಿರ್ದೇಶಕ ಆರ್.ಮಹೇಶ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಉಪಾಧ್ಯಕ್ಷ ಎಂ.ಸುಬ್ರಹ್ಮಣ್ಯ, ಕಾರ್ಯದರ್ಶಿ ಕೆ.ಜೆ.ಲೋಕೇಶ್‌ಬಾಬು ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net