

ವಿಜಯವಾಣಿ ಸುದ್ದಿಜಾಲ ಆರ್ಡಿ
ಹಿರಿಯರಿಂದ ದೊರೆತ ಮಾನವೀಯ ಗುಣಗಳು ಸಮಾಜದ ಬಹುದೊಡ್ಡ ಆಸ್ತಿ. ಅರಸಮ್ಮಕಾನು ನೆರಳು ಚಾರಿಟೆಬಲ್ ಟ್ರಸ್ಟ್‌ನ ನೆರವಿನ ನೆರಳು ಕಾರ್ಯಕ್ರಮ ಆಶಕ್ತ ಜನರ ಪಾಲಿಗೆ ಬೆಳಕು ನೀಡುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ಎನ್.ಸಂತೋಷ ಹೆಗ್ಡೆ ಹೇಳಿದರು.
ಶೇಡಿಮನೆ ಸಮೀಪದ ಅರಸಮ್ಮಕಾನು ನೆರಳು ಚಾರಿಟೆಬಲ್ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ನೆರವಿನ ನೆರಳು ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ಕಾರ್ಯಕ್ರಮ ಉದ್ಘಾಟಿಸಿದರು. ಅರಸಮ್ಮಕಾನು ನೆರಳು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಕೆ.ರಾಧಾಕೃಷ್ಣ ಕ್ರಮಧಾರಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೆಬಲ್ ಫೌಂಡೇಶನ್ ಅಧ್ಯಕ್ಷ ಬಿ.ಸತೀಶ್ ಕಿಣಿ, ಕುಂದಾಪುರ ಲೋಕೋಪಯೋಗಿ ಇಲಾಖೆ ಅಭಿಯಂತ ಮಹಾಬಲ ನಾಯ್ಕ ಅಲ್ಬಾಡಿ, ಕರ್ಣಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ, ಅರಸಮ್ಮಕಾನು ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳದ ಅರ್ಚಕ ನಾಗರಾಜ ಬಾಯರಿ ಗಂಗಡಬೈಲು, ಡಾ.ಅಭಿಷೇಕ್ ಬಾಯರಿ ಗಂಗಡಬೈಲು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಚಂದ್ರಶೇಖರ ಶೆಟ್ಟಿ, ಪತ್ರಕರ್ತ ಜಾನ್ ಡಿಸೋಜ, ಮಡಾಮಕ್ಕಿ ಗ್ರಾಪಂ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ನೆರಳು ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ಪ್ರವೀಣ ಹಾಗೂ ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
25 ಅಶಕ್ತ ಕುಟುಂಬಗಳಿಗೆ ನೆರವಿನ ನೆರಳು ಚೆಕ್ ವಿತರಿಸಲಾಯಿತು. ದಿನೇಶ್ ಶೆಟ್ಟಿ ಬೆಪ್ಡೆ, ಗಣಪತಿ ಶೆಟ್ಟಿ ಬೆಪ್ಡೆ ಹಾಗೂ ಬಳಗದಿಂದ ಯಕ್ಷಗಾನ ವೈಭವ, ಪುತ್ತೂರು ಜಗದೀಶ್ ಆಚಾರ್ಯ ಮತ್ತು ತಂಡದಿಂದ ಸಂಧ್ಯಾರಾಗ ಕಾರ್ಯಕ್ರಮ ನಡೆಯಿತು. ರಾಜೀವ ಪೂಜಾರಿ ಸ್ವಾಗತಿಸಿದರು. ಕೆ.ರಾಧಾಕೃಷ್ಣ ಕ್ರಮಧಾರಿ ಪ್ರಸ್ತಾವನೆಗೈದರು. ಚೆನ್ನಾ ಪೂಜಾರಿ ಸನ್ಮಾನ ಪತ್ರ ವಾಚಿಸಿದರು. ಮಂಜುನಾಥ ಆಚಾರ್ಯ ವಂದಿಸಿದರು. ಪ್ರಕಾಶ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಅನಾರೋಗ್ಯ ಹಾಗೂ ವಿವಿಧ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿರುವ ಅಶಕ್ತ ಕುಟುಂಬದವರಿಗೆ ಟ್ರಸ್ಟ್ ಮೂಲಕ ನೆರವು ನೀಡುವ ಕಾರ್ಯ ಶ್ರೇಷ್ಠ. ಇಂತಹ ಮಾನವೀಯ ಸೇವಾ ಕಾರ್ಯದಿಂದ ಸಂತೃಪ್ತಿ ಪಡೆಯಬಹುದು. ಅರಸಮ್ಮಕಾನು ನೆರಳು ಚಾರಿಟೆಬಲ್ ಟ್ರಸ್ಟ್ ಕಾರ್ಯ ಮೆಚ್ಚುವಂಥದ್ದು. - ಬಿ.ಸತೀಶ್ ಕಿಣಿ ಬೆಳ್ವೆ, ಅಧ್ಯಕ್ಷರು, ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೆಬಲ್ ಫೌಂಡೇಶನ್ https://www.vijayavani.net/complete-jaljeevan-mission-work https://www.vijayavani.net/memories-are-eternal-through-commemorative-events