ರೈತರನ್ನು ಒಕ್ಕಲೆಬ್ಬಿಸಲು ಅವಕಾಶ ಕೊಡಲ್ಲ

Manjunath-HSK-01
Published on

 ವಿಜಯವಾಣಿ ಸುದ್ದಿಜಾಲ ಹೊಸಕೋಟೆ

ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿಯ 32 ಗ್ರಾಮಗಳ 18,500 ಎಕರೆ ಪ್ರದೇಶದಲ್ಲಿ ಟೌನ್ ಶಿಪ್ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತೇನೆ, ಇಲ್ಲಿನ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಎಂಎಲ್‌ಸಿ ಎಂಟಿಬಿ ನಾಗರಾಜ್ ಹೇಳಿದರು.

ನಗರದ ಅಂಬೇಡ್ಕರ್ ಭವನದ ಆವರಣದಲ್ಲಿ ಬುಧವಾರ ವಿಧಾನ ಪರಿಷತ್ ಸದಸ್ಯರ ವಿಶೇಷ ಅನುದಾನದಲ್ಲಿ 22 ಮಂದಿ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸಿ ಮಾತನಾಡಿದರು. ಇದೇ ಪ್ರದೇಶದಲ್ಲಿ 2005 ಹಾಗೂ 2006 ನೇ ಇಸವಿಯಲ್ಲಿ ಸ್ಪೆಷಲ್ ಎಕನಾಮಿಕ್ ಜೋನ್ ನಿರ್ಮಾಣ ಮಾಡಲು ಹೊರಟಿದ್ದ ನಮ್ಮದೇ ಸರ್ಕಾರದ ವಿರುದ್ಧ ಸದನದಲ್ಲಿ ವಿರೋಧ ವ್ಯಕ್ತಪಡಿಸಿ ರೈತರ ಭೂಮಿ ಉಳಿಸುವ ಕಾರ್ಯ ಮಾಡಿದ್ದೆನೇ, ಒಂದು ವೇಳೆ ಸರ್ಕಾರ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ತಾಲೂಕಿನ ರೈತಾಪಿ ಜನರು ಹಾಗೂ ವಿವಿಧ ಸಂಘಟನೆಗಳ ಜತೆಗೂಡಿ ಪಕ್ಷಾತೀತವಾಗಿ, ಜಾತ್ಯಾತೀಕವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪಂಚ ಭಾಗ್ಯಗಳ ನೆಪದಲ್ಲಿ ರಾಜ್ಯ ಸರ್ಕಾರ ಹೊಸಕೋಟೆ ಸೇರಿ ರಾಜ್ಯದ ಯಾವುದೇ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಮಾಡಲು ವಿಲವಾಗಿದೆ, ರಾಜ್ಯವನ್ನು ದಿವಾಳಿ ಅಂಚಿನಲ್ಲಿ ತಂದು ನಿಲ್ಲಿಸಿದೆ, ಹಲವು ಇಲಾಖೆಗಳಿಗೆ ವೇತನ ನೀಡಲು ಸಾಧ್ಯವಾಗದೆ ಪರದಾಡುತ್ತಿದೆ, ಭಾಗ್ಯದ ಲಾನುಭವಿಗಳಿಗೂ ಸರಿಯಾಗಿ ಯೋಜನೆ ತಲುಪುತ್ತಿಲ್ಲ, ಅನೇಕ ಸಬೂಬು ಹೇಳಿ ಲಾನುಭವಿಗಳ ಹೆಸರನ್ನು ಕೈಬಿಡಲಾಗುತ್ತಿದೆ, ಇದರ ಜತೆಗೆ ವೃದ್ಧಾಪ್ಯವೇತನ ಸೇರಿ ಹಲವು ಪಿಂಚಣಿದಾರರಿಗೂ ಹಣ ಪಾವತಿ ಮಾಡಲು ಸಾಧ್ಯವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

22 ಮಂದಿಗೆ ತ್ರಿಚಕ್ರ ವಿತರಣೆ: ವಿಧಾನ ಪರಿಷತ್ ಸದಸ್ಯರಿಗೆ ಪ್ರತಿವರ್ಷ ನೀಡುವ 2 ಕೋಟಿ ರೂ.ಅನುದಾನದಲ್ಲಿ ಶೇ. 5 ರಿಂದ 10 ರಷ್ಟು ಅನುದಾನವನ್ನು ಬಳಕೆ ಮಾಡಿಕೊಂಡು ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ನೀಡಲು ಅವಕಾಶವಿದೆ ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ 22 ಫಲಾನುಭವಿಗಳಿಗೆ ಸಲವತ್ತು ವಿತರಣೆ ಮಾಡುತ್ತಿದ್ದೇನೆ ಎಂದು ಎಂಟಿಬಿ ತಿಳಿಸಿದರು. 2004 ರಿಂದ ಇದುವರೆಗೂ ನನ್ನ ಅಧಿಕಾರಾವಧಿಯಲ್ಲಿ 105 ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಲಾಗಿದೆ. ಇನ್ನು 7ಮಂದಿ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ನೀಡಲು ನಮ್ಮಲ್ಲಿ ಅನುದಾನ ಇದ್ದು ಅರ್ಹ ಫಲಾನುಭವಿಗಳನ್ನು ಗುರುತಿಸುವಂತೆ ನಗರಸಭೆ ಆಡಳಿತ ಮಂಡಳಿಗೆ ಸೂಚಿಸಲಾಗಿದೆ ಎಂದರು

ಮೂರು ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು ರಾಜ್ಯದ ವಿಧಾನಸಭಾ ವ್ಯಾಪ್ತಿಯ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು ಮೂರು ಕ್ಷೇತ್ರಗಳಲ್ಲಿ ಬಿಜೆಪಿ, ಎನ್‌ಡಿಎ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಪ್ರಮುಖವಾಗಿ ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ, ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ. ಸಂಡೂರಿನಲ್ಲಿ ತೀವ್ರ ಪೈಪೋಟಿ ಇದ್ದು ಗೆಲುವು 50:50 ಇದೆ, ಲಿತಾಂಶದವರೆಗೂ ಕಾದು ನೋಡಬೇಕಿದೆ ಎಂದು ಎಂಟಿಬಿ ನಾಗರಾಜ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net