ವಿದ್ಯಾರ್ಥಿಗಳ ಕಲಿಕೆಗೆ ಕ್ರೀಡೆ ಪೂರಕ : ರಾಬಿನ್ ಆರ್.

kreeda
ವಡ್ಡರ್ಸೆ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಕ್ರೀಡೋಪಕರಣ ವಿತರಿಸಿ ರಾಬಿನ್.ಆರ್ ಮಾತನಾಡಿದರು
Published on

ಕೋಟ: ಮಕ್ಕಳ ಶಾರೀರಿಕ, ಬೌದ್ಧಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ. ಹೊರಾಂಗಣದಂತೆ ಒಳಾಂಗಣ ಕ್ರೀಡೆಗೂ ಹೆಚ್ಚು ಪ್ರೋತ್ಸಾಹಿಸಬೇಕು. ಕಲಿಕೆಗೆ ಇದು ಪೂರಕವಾಗುತ್ತದೆ ಎಂದು ಕೆನರಾ ಬ್ಯಾಂಕ್ ಪ್ರಬಂಧಕ ರಾಬಿನ್ ಆರ್. ಹೇಳಿದರು.

ಕೆನರಾ ಬ್ಯಾಂಕ್ ವಡ್ಡರ್ಸೆ ಶಾಖೆ ವತಿಯಿಂದ ವಡ್ಡರ್ಸೆ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಕ್ರೀಡೋಪಕರಣ ವಿತರಿಸಿ ಶುಭಹಾರೈಸಿದರು. ಕೆನರಾ ಬ್ಯಾಂಕ್ ಅಧಿಕಾರಿ ಸಿ.ಬಿ.ರಾಜನ್ ಹಾಗೂ ಎಸ್‌ಡಿಎಂಸಿ ಅಧ್ಯಕ್ಷೆ ಉಷಾ ಶುಭಹಾರೈಸಿದರು. ಯೋಗ ತರಬೇತುದಾರ ನಾಗೇಂದ್ರ ಅವರನ್ನು ಸನ್ಮಾನಿಸಲಾಯಿತು. ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯ ಭೋಜ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಸುಧಾಕರ, ಭಾರತಿ, ಶರತ್, ಗೀತಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಗಾಯತ್ರಿ ದೇವಿ ಸ್ವಾಗತಿಸಿದರು. ಶಿಕ್ಷಕ ಹೆರಿಯ ವಂದಿಸಿದರು. ಆನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net