

ಪಂಚನಹಳ್ಳಿ: ಬಿಸಿಎಂ ಇಲಾಖೆಯ ವ್ಯಾಪ್ತಿಯ ವಸತಿ ನಿಲಯದಲ್ಲಿ ಸರಿಯಾದ
ಉಪಹಾರ ನೀಡದೆ ಮಕ್ಕಳಿಗೆ ಕಾಟಚಾರಕ್ಕೆ ಆಡುಗೆ ತಯಾರಿಸಿ ನೀಡಲಾಗುತ್ತಿದೆ
ಎಂದು ಗ್ರಾಪಂ ಅಧ್ಯಕ್ಷ ಪಿ.ಎಂ.ರಂಗನಾಥ್ ಕಿಡಿಕಾರಿದರು.
ಪಂಚನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಗ್ರಾಪಂ
ಮಟ್ಟದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಆಡುಗೆ ತಯಾರಿ ಸೇರಿದಂತೆ
ಹಾಸ್ಟೆಲ್ ಅವ್ಯವಸ್ಥೆಯ ಬಗ್ಗೆ ಪಾಲಕರಿಂದ ಸಾಕಷ್ಟು ದೂರುಗಳು ಬಂದಿವೆ. ಹಾಸ್ಟೆಲ್‌ನ
ಕೊಠಡಿ, ಕಿಟಕಿಗಳು ಹಾಳಾಗಿದ್ದರೂ ಸರಿಪಡಿಸದೆ ನಿರ್ಲಕ್ಷ್ಯವಹಿಸಲಾಗಿದೆ. ಶೀಘ್ರದಲ್ಲಿ
ಈ ಸಮಸ್ಯೆ ಸರಿಪಡಿಸಿಕೊಂಡು ಮಕ್ಕಳಿಗೆ ಗುಣಮಟ್ಟದ ಆಹಾರ ಮತ್ತು
ಸವಲತ್ತುಗಳನ್ನು ಒದಗಿಸಿಸುವಂತೆ ಬಿಸಿಎಂ ಮೇಲ್ವಿಚಾರಕ ಧನಂಜಯ್‌ಗೆ
ಸೂಚಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಸಾವೆ ಮರುಳಪ್ಪ ಮಾತನಾಡಿ, ಗ್ರಾಮದಲ್ಲಿ 85 ತೋಟದ
ಮನೆಗಳಿದ್ದು ಇದುವರೆಗೂ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಈ ಬಗ್ಗೆ
ಮೆಸ್ಕಾಂ ಅಧಿಕಾರಿಗಳ ಬಳಿ ಮನವಿ ಮಾಡಿದರೂ ಯಾವುದೇ
ಪ್ರಯೋಜನವಾಗುತ್ತಿಲ್ಲ. ಕೂಡಲೇ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್
ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿದರು.
ಗ್ರಾಪಂ ಉಪಾಧ್ಯಕ್ಷೆ ರೂಪ ಶ್ರೀನಿವಾಸ್, ಗ್ರಾಪಂ ಸದಸ್ಯ ಪಂಚನಹಳ್ಳಿ ಪಾಪಣ್ಣ,
ಆರ್.ರೇಖಾ, ಪಿ.ಎಸ್.ಸಂತೋಷ್, ತಾ ಮಣಿ, ಶೀಲಾ, ಶಾರದಮ್ಮ, ಪಿಡಿಒ
ಪಿ.ಎಂ.ಪುಷ್ಪಾ ಮತ್ತಿತರಿದ್ದರು.