ಮರಸಣಿಗೆ ಗ್ರಾಪಂನಿಂದ ನಿವೇಶನ ವಿತರಿಸಿ

kl protest
ಮರಸಣಿಗೆ ಗ್ರಾಪಂ ಎದುರು ಸಿಪಿಐನಿಂದ ಪ್ರತಿಭಟನೆ ನಡೆಸಲಾಯಿತು. ಮುಖಂಡರಾದ ಲಕ್ಷ್ಮಣಾಚಾರ್, ರಮೇಶ್, ಗೋಪಾಲ ಇತರರಿದ್ದರು.
Published on

ಕಳಸ: ಕಳಸ ತಾಲೂಕಿನ ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಹಂಚುವುದು ಹಾಗೂ 94ಸಿ ಅಡಿಯಲ್ಲಿ ಹಕ್ಕುಪತ್ರ ವಿಳಂಬ ಆಗುತ್ತಿರುವುದನ್ನು ಖಂಡಿಸಿ ಸಿಪಿಐನಿಂದ ಮರಸಣಿಗೆ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಮರಸಣಿಗೆ ಗ್ರಾಪಂ ಮುಂಭಾಗ ಕೆಲ ಕಾಲ ಪ್ರತಿಭಟನೆ ನಡೆಸಿದರು. ಸಿಪಿಐ ಮುಖಂಡ ಗೋಪಾಲ ಶೆಟ್ಟಿ ಮಾತನಾಡಿ, ಮರಸಣಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಹಲವಾರು ನಿವೇಶನ ರಹಿತರ ಪಟ್ಟಿ ಇದೆ. ಹಾಗೆ ಹಲವಾರು ಜನ ನಿವೇಶನ ರಹಿತರು ಪಟ್ಟಿಯಿಂದ ಹೊರಗೆ ಕೂಡಾ ಇದ್ದಾರೆ ಎಂದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ನಿವೇಶನ ರಹಿತರನ್ನು ಗುರುತುಪಡಿಸಲು ಮತ್ತು 94ಸಿ ಅಡಿಯಲ್ಲಿ ಹಕ್ಕುಪತ್ರ ನೀಡದೆ ಇರುವ ಕುಟುಂಬಗಳನ್ನು ಗುರುತಿಸಿ, ತುರ್ತು ಹಕ್ಕುಪತ್ರ ನೀಡುವ ಜರೂರು ಕ್ರಮ ಕೈಗೊಳ್ಳಬೇಕು. ನಿವೇಶನ ಹಾಗೂ 94ಸಿ ಅಡಿಯಲ್ಲಿ ಹಕ್ಕುಪತ್ರ ಆಕಾಂಕ್ಷಿಗಳಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು. ಈ ಹಿನ್ನೆಲೆಯಲ್ಲಿ ಈ ಹಿಂದಿನ ಜನಪ್ರತಿನಿಧಿಗಳ ನಿರಾಸಕ್ತಿಯಿಂದ ನಿವೇಶನ ರಹಿತರಿಗೆ ತೊಂದರೆಯಾಗಿದೆ. ಮರಸಣಿಗೆ ಗ್ರಾಮ ವ್ಯಾಪ್ತಿಯಲ್ಲಿ ಈ ಹಿಂದೆ ಗುರುತು ಪಡಿಸಿರುವ ಜಾಗಗಳಲ್ಲಿ ಈಗಿರುವ ನಿವೇಶನ ರಹಿತರ ಫಲಾನುಭವಿಗಳ ಪಟ್ಟಿಗಳಲ್ಲಿ ಪುನಃ ಹೊಸದಾಗಿ ಪಟ್ಟಿಗೆ ಸೇರ್ಪಡಿಸುವ ಫಲಾನುಭವಿಗಳನ್ನು ಗುರುತು ಮಾಡಿ, ಪಟ್ಟಿ ತಯಾರಿಸಿ, ತುರ್ತು ಹಕ್ಕುಪತ್ರ ನೀಡುವ ಜರೂರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಿವೇಶನಕ್ಕಾಗಿ 20 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತ ಬರುತ್ತಿದ್ದೇವೆ. ಈ ವಿಚಾರವನ್ನು ಈ ಭಾಗದ ಜನಪ್ರತಿನಿಧಿಯಾಗಿ ಹಾಗೂ ಆಶ್ರಯ ಸಮಿತಿಯ ಅಧ್ಯಕ್ಷರೇ ಆಗಿರುವುದರಿಂದ ಮರಸಣಿಗೆ ಗ್ರಾಪಂ ಮುಂದೆ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು. ಮುಖಂಡರಾದ ಲಕ್ಷ್ಮಣಾಚಾರ್, ರಮೇಶ್ ಕೆಳಗೂರು, ಗೋಪಾಲ, ಮೋಹನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net