ಹಾಲು ಒಕ್ಕೂಟದ ಸವಲತ್ತು ಪಡೆಯಿರಿ

28 tubgere 1
Distribute milk can
Published on

ವಿಜಯವಾಣಿ ಸುದ್ದಿಜಾಲ ತೂಬಗೆರೆ
ಹಾಲು ಒಕ್ಕೂಟದಿಂದ ದೊರೆಯುವ ಎಲ್ಲ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ರೈತರಿಗೆ ಬಮುಲ್ ನಿರ್ದೇಶಕ ಬಿ.ಸಿ.ಆನಂದ್ ತಿಳಿಸಿದರು.
ಹೋಬಳಿಯ ತುರುವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಾಲು ಸರಬರಾಜು ಮಾಡಿರುವ ಎಲ್ಲ ಸದಸ್ಯರಿಗೆ ಹಾಲಿನ ಕ್ಯಾನ್ ವಿತರಿಸಿ ಮಾತನಾಡಿದರು.
ನಾನು ಒಬ್ಬ ರೈತ ನಾನು ಹಾಲು ಸರಬರಾಜು ಮಾಡಿದ್ದೇನೆ ರೈತರ ಕಷ್ಟ ನನಗೂ ಗೊತ್ತು. ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯವರ ಪಾತ್ರ ಹೆಚ್ಚು ಇರುತ್ತದೆ. ಯಾಕೆಂದರೆ ಹಸು ಸತ್ತರೆ ಹಣ ಕೊಡಿಸಬಹುದು ವಿಮೆ ಮಾಡಿಸಬಹುದು. ಇನ್ನು ಮುಂತಾದ ಸೌಲಭ್ಯಗಳಿಗೆ ಕಾರ್ಯದರ್ಶಿ ಬೇಕೇಬೇಕು. ಅದರಲ್ಲೂ ಕೆಲ ಕಾರ್ಯದರ್ಶಿ ಅವರು ರೈತರಿಗೆ ಒಕ್ಕೂಟದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿಯೇ ನೀಡುವುದಿಲ್ಲ ಎಂದು ಹೇಳಿದರು.
ಸಂಘದ ಅಧ್ಯಕ್ಷ ಕಾಂತರಾಜು ಮಾತನಾಡಿ, ಹಸುಗಳಿಂದ ಹಾಲು ಒಂದೇ ಉತ್ಪಾದನೆ ಅಲ್ಲ. ಸಗಣಿಯಿಂದ ನಾನಾ ರೀತಿಯ ಉಪಯೋಗಗಳನ್ನು ಪಡೆಯಬಹುದು. ರೈತರು ಇದನ್ನು ಅರಿತುಕೊಳ್ಳಬೇಕು. ಸಂಘಕ್ಕೆ ಗುಣಮಟ್ಟದ ಹಾಲು ಹಾಕಿದಾಗ ಮಾತ್ರ ಸಂಘ ಬೆಳೆಯುತ್ತದೆ. ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಹಾಲು ಉತ್ಪಾದನೆ ಮಾಡಿ, ಸಂಘಗಳ ಲಾಭಾಂಶ ಹೆಚ್ಚಿಸಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net