ಎಲ್ಲ ವಾರ್ಡ್‌ಗಳಿಗೂ ಅನುದಾನ ಹಂಚಿಕೆ ಮಾಡಿ

indi meting
ಇಂಡಿ ಪಟ್ಟಣದ ಪುರಸಭೆಯಲ್ಲಿ ಬುಧವಾರ ಸಾಮಾನ್ಯ ಸಭೆ ನಡೆಯಿತು.
Published on

ಇಂಡಿ: ಪಟ್ಟಣದ ಪುರಸಭೆ ಸಭಾಭವನದಲ್ಲಿ ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಅಧ್ಯಕ್ಷತೆಯಲ್ಲಿ ಬುಧವಾರ ಸಾಮಾನ್ಯ ಸಭೆ ನಡೆಯಿತು.

ಸಭೆಯಲ್ಲಿ 2015- 16ನೇ ಸಾಲಿನ 15ನೇ ಹಣಕಾಸು ಯೋಜನೆಯ ಅನುದಾನ 2.24 ಕೋಟಿ ರೂ. ಕ್ರಿಯಾ ಯೋಜನೆ ತಯಾರಿಸಿ ಎಲ್ಲ 23 ವಾರ್ಡ್‌ಗಳಲ್ಲಿ ಸರಿಯಾಗಿ ಹಂಚಬೇಕೆಂದು ಸದಸ್ಯರಾದ ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ಇಸ್ಮಾಯಿಲ್ ಅರಬ, ಅಯ್ಯೂಬ್ ಬಾಗವಾನ, ಉಮೇಶ ದೇಗಿನಾಳ ಒತ್ತಾಯಿಸಿದರು.

ವಿಜಯವಾಣಿಯಲ್ಲಿ ಪ್ರಕಟಗೊಂಡ ವರದಿ ಚರ್ಚೆ: ಬುಧವಾರ ‘ವಿಜಯವಾಣಿ’ ಪತ್ರಿಕೆಯಲ್ಲಿ ‘ಹಳ್ಳಕ್ಕೆ ಸೇರುತ್ತಿರುವ ಕೊಳಚೆ ನೀರು’ ಶೀರ್ಷಿಕೆಯಡಿ ಪ್ರಕಟಗೊಂಡ ಸುದ್ದಿ ಕುರಿತು ಸದಸ್ಯ ಅನಿಲಗೌಡ ಬಿರಾದಾರ, ದೇವೇಂದ್ರ ಕುಂಬಾರ ಸಭೆ ಗಮನಕ್ಕೆ ತಂದರಲ್ಲದೆ, ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಅವರಿಗೆ ಈ ಕುರಿತು ಪ್ರಶ್ನಿಸಿದಾಗ, ಸ್ವಚ್ಚತೆಗೆ ಅವಶ್ಯವಿರುವ ಮಷೀನ್ ಖರೀದಿಗೆ 40 ಲಕ್ಷ ರೂ. ಖರ್ಚಾಗುತ್ತದೆ ಎಂದಾಗ ಆ ಮಷೀನ್‌ನನ್ನು ಕೂಡಲೇ ಖರೀದಿಸಬೇಕೆಂದು ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ಸಿಕ್ಕಿತು.

ಸಾಮಾನ್ಯ ಅನುದಾನದಲ್ಲಿ ಪ್ರತಿ ವಾರ್ಡಿಗೂ 2 ಲಕ್ಷ ರೂ. ನೀಡುವುದು. 2025-26ನೇ ಸಾಲಿನ ಎಸ್‌ಎ್ಸಿ ಮುಕ್ತ ನಿಧಿ ಯೋಜನೆಯಡಿ ಹಂಚಿಕೆಯಾದ ಅನುದಾನ 11 ಲಕ್ಷ ರೂ., ಎಸ್.ಸಿ.ಸಿ.ಎಸ್.ಪಿ ಯೋಜನೆಯಡಿ ಹಂಚಿಕೆಯಾದ ಅನುದಾನ 7 ಲಕ್ಷ ರೂ. ಕ್ರಿಯಾ ಯೋಜನೆ ತಯಾರಿಸುವ ಕುರಿತು ಚರ್ಚೆ ನಡೆಯಿತು.

ಪುರಸಭೆಯಲ್ಲಿ 95 ಜನ ದಿನಗೂಲಿ ನೌಕರರಿದ್ದರೂ ಅದರಲ್ಲಿ 70 ನೌಕರರು ಮಾತ್ರ ಬರುತ್ತಾರೆ. 25 ಜನರು ಬರುವುದೇ ಇಲ್ಲ. ಅವರು ಕೆಲಸಕ್ಕೆ ಬರುವಂತಾಗಬೇಕು. ಇಲ್ಲದಿದ್ದರೆ ವಜಾ ಮಾಡಬೇಕೆಂಬುದನ್ನೂ ಚರ್ಚಿಸಲಾಯಿತು.

ಪುರಸಭೆ ಅಧ್ಯಕ್ಷರು ಸದಸ್ಯರ ಗಮನಕ್ಕೆ ತರದೆ ಹಣ ತೆಗೆಯುತ್ತಿದ್ದಾರೆ. ಯಾವುದೇ ಹಣ ತೆಗೆಯುವ ಮುನ್ನ ಸದಸ್ಯರ ಸಭೆಯಲ್ಲಿ ಚರ್ಚೆ ಮಾಡಲು ವಿನಂತಿಸಿದರು.

ಉಪಾಧ್ಯಕ್ಷ ಜಹಾಂಗೀರ ಸೌದಾಗರ, ಸದಸ್ಯರಾದ ಸಂಗೀತಾ ಕರಿಕಟ್ಟಿ, ಸೈಫನ್ ಪವಾರ, ಮುಸ್ತಾಕ್ ಇಂಡೀಕರ್, ಇಸ್ಮಾಯಿಲ್ ಅರಬ, ವಿಜಯ ಮೂರಮನ, ಜಹಾಂಗೀರ ಸೌದಾಗರ, ರೇಣುಕಾ ಉಟಗಿ, ಬನ್ನೆಮ್ಮ ಹದರಿ, ಶೈಲಜಾ ಪೂಜಾರಿ, ಸುಜಾತಾ ಪಾಟೀಲ, ಭಾಗೀರತಿ ಕುಂಬಾರ, ಜ್ಯೋತಿ ರಾಠೋಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net