ಮುಂದುವರಿದ ವರ್ಷಧಾರೆ, ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

rain in koppal people problem
ಕೊಪ್ಪಳದಲ್ಲಿ ಮಳೆ ನೀರು ಜವಾಹರ ರಸ್ತೆಗೆ ನುಗ್ಗಿದ್ದರಿಂದ ವಾಹನ ಸವಾರರು ಪರದಾಡಿದರು.
Published on

ಕೊಪ್ಪಳ: ನಗರ ಸೇರಿ ತಾಲೂಕಿನಾದ್ಯಂತ ವರ್ಷಧಾರೆ ಮುಂದುವರೆದಿದೆ. ಮಂಗಳವಾರ ಬೆಳಗಿನಿಂದ ರಾತ್ರಿವರೆಗೂ ಆಗಾಗ ವರುಣ ಆರ್ಭಟಿಸಿದ. ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ತೊಂದರೆ ಅನುಭವಿಸುವಂತಾಯಿತು.

ಸೋಮವಾರ ಬಿಡುವು ಕೊಟ್ಟ ಮಳೆರಾಯ, ಮಂಗಳವಾರ ಬೆಳಗ್ಗೆ 11ರಿಂದಲೇ ವರ್ಷಧಾರೆ ಸುರಿಸಿದ. ನಡುವೆ ಕೆಲ ಹೊತ್ತು ಬಿಡುವು ದೊರೆತರೂ ನಿರಂತರ ಮಳೆ ಸುರಿಯಿತು. ನಗರದ ರೈಲ್ವೆ ನಿಲ್ದಾಣ ರಸ್ತೆ, ಜವಾಹರ ರಸ್ತೆ, ಕುವೆಂಪು ನಗರ, ಗಣೇಶ ತಗ್ಗು ಸೇರಿ ಇತರ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತು. ಕೆಲವೆಡೆ ಕೆರೆಯಂತೆ ನೀರು ಸಂಗ್ರಹವಾಯಿತು. ಬಸ್​ ನಿಲ್ದಾಣ ಮುಂಭಾಗದಲ್ಲೂ ನೀರು ಸಂಗ್ರಹವಾಯಿತು. ರಸ್ತೆಯಲ್ಲಿ ನೀರು ನುಗ್ಗಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.

ಬೀದಿ ಬದಿ ಅಂಗಡಿಕಾರರು ಮಳೆಯಲ್ಲಿ ನೆನೆಯುವಂತಾಯಿತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಸಂಕಷ್ಟ ಅನುಭವಿಸಿದರು. ಮಳೆಯಲ್ಲಿಯೇ ಮನೆಗೆ ನುಗ್ಗಿದ ನೀರು ಹೊರ ಹಾಕುವ ದೃಶ್ಯಗಳು ಕಂಡುಬಂದವರು. ನಗರಸಭೆ ಅಧಿಕಾರಿಗಳು ರಾಜಕಾಲುವೆ ಹೂಳು ತೆಗೆಯಲು ಮುಂದಾಗಿದ್ದು, ನೀರ ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net