ಹುತಾತ್ಮ ಯೋಧರ ಸ್ಮರಣೆ ಶ್ಲಾಘನೀಯ

distrcit koppal kargil soldiers indian army mallayya megalamath
Published on

ಕೊಪ್ಪಳ: ಕಾರ್ಗಿಲ್​ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸುವುದು ಶ್ಲಾಘನೀಯ ಎಂದು ಸಹಾಯಕ ಆಯುಕ್ತ ಕ್ಯಾ.ಮಹೇಶ ಮಾಲಗಿತ್ತಿ ಹೇಳಿದರು.

ನಗರದ ನಿವೃತ್ತ ಸೈನಿಕ ಕಚೇರಿಯಲ್ಲಿ ಬುಧವಾರ ಕೇಂದ್ರ ಸರ್ಕಾರ ರ್​ ರ್​ ಶೌರ್ಯ ಸನ್ಮಾನ ಕಾರ್ಯಕ್ರಮದಡಿ ಹುತಾತ್ಮ ಯೋಧರ ಕುಟುಂಬದವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದು ಗೌರವ ಕಾರ್ಯ. ರ್​ ರ್​ ಶೌರ್ಯ ಸನ್ಮಾನ ಕಾರ್ಯಕ್ರಮ ಮೂಲಕ ಕಾರ್ಗಿಲ್​ ಹೋರಾಟವನ್ನು ಜನತೆಗೆ ತಿಳಿಸುವ ಕೆಲಸ ಮಾಡುತ್ತಿದೆ. ಕಾರ್ಗಿಲ್​ ಯುದ್ಧದ ರೋಚಕತೆ ಮತ್ತು ಸೈನಿಕರ ಹೋರಾಟ ಸಾಮಾನ್ಯವಲ್ಲ. ಆಗಿನ ಸ್ಥಿತಿಯಲ್ಲಿ ಅಲ್ಲಿಯ ವಾತವಾರಣದಲ್ಲಿ ಸೇನೆ ಹೋರಾಟ ಮಾಡಿದ್ದನ್ನು ಪದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ. ಅಳವಂಡಿ ವೀರಯೋಧ ಮಲ್ಲಯ್ಯ ಮೇಗಳಮಠ ಅವರು ಯುದ್ಧದಲ್ಲಿ ಹೋರಾಡಿ ಹುತಾತ್ಮರಾದರು. ಅವರನ್ನು ಪುನ@ ಸ್ಮರಿಸುವುದು ಮತ್ತು ಅವರ ಕುಟುಂಬವನ್ನು ಸನ್ಮಾನಿಸುತ್ತಿರುವುದು ನಿಜಕ್ಕೂ ಅರ್ಥಪೂರ್ಣ ಎಂದರು.

ನಿವೃತ್ತ ಸೈನಿಕರ ಸಂದ ಅಧ್ಯಕ್ಷ ಮಾರುತಿ ಗೊಂದಿ ಮಾತನಾಡಿ, ಸೈನಿಕರನ್ನು ಕಾರ್ಗಿಲ್​ ವಿಜಯ ದಿವಸ ಸ್ಮರಿಸುತ್ತಾರೆ. ನಂತರ ಮರೆತುಬಿಡುತ್ತಾರೆ. ನಿವೃತ್ತಿ ಬಳಿಕ ದೊರೆಯಬೇಕಾದ ಗೌರವ, ಸೌಲಭ್ಯ ಸಿಗುತ್ತಿಲ್ಲ. ಹೋರಾಟ ಮಾಡಬೇಕಾದ ಸ್ಥಿತಿ ಇದೆ ಎಂದು ಅಳಲು ತೋಡಿಕೊಂಡರು.

ಸೇನೆ ಪರವಾಗಿ ಆಗಮಿಸಿದ ಸುಭೇದಾರ ತಿಲಕ್​ ಮಾತನಾಡಿ, ಕಾರ್ಗಿಲ್​ ಹೋರಾಟದಲ್ಲಿ ಹುತಾತ್ಮರಾದ ಯೋಧರ ಕುಟುಂಬದವರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ದೇಶದ 521 ಕುಟುಂಬಗಳ ಬಳಿ ಸೇನೆ ತೆರಳಿ ಸನ್ಮಾನಿಸುತ್ತಿದೆ. ರಾಜ್ಯದ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಕೊಪ್ಪಳದ ಯೋಧರಾಗಿದ್ದ ಮಲ್ಲಯ್ಯ ಮೇಗಳಮಠ ಅವರ ಪತ್ನಿ ಸರೋಜಾ, ಶಿವಬಸಯ್ಯ ಕುಲಕರ್ಣಿ ಅವರ ಪತ್ನಿ ನಿರ್ಮಲಾ ಅವರನ್ನು ಸನ್ಮಾನಿಸಲಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್​ ವಿಠ್ಠಲ ಚೌಗಲಾ, ಸೈನಿಕರ ಕುಟುಂಬದವರಾದ ದಾಾಯಣಿ, ಸೈನಿಕ ರಜೀಸ್​, ನಿವೃತ್ತ ಸೈನಿಕರಾದ ಲಕ್ಷ$್ಮಣ ಅಸುಂಡಿ, ಸೈಯೂಜ್​, ಉಮೇಶ ಕಾಮನೂರು, ಇಂಧುದರ ಸೊಪ್ಪಿಮಠ, ಮಲ್ಲಿಕಾರ್ಜುನ ಸಜ್ಜನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net