ಫೆ 5 ರಂದು ಕೊಪ್ಪಳದಲ್ಲಿ ವಿದ್ಯುತ್​ ಗ್ರಾಹಕರ ಸಂವಾದ ಸಭೆ

Published on

ಕೊಪ್ಪಳ: ಜೆಸ್ಕಾಂನಿಂದ ಇ.ಎಚ್​.ಟಿ., ಎಚ್​.ಟಿ ವಿದ್ಯುತ್​ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ವಿದ್ಯುತ್​ ಗ್ರಾಹಕರ ಸಂವಾದ ಸಭೆಯನ್ನು ಫೆಬ್ರವರಿ 5 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಕಾರ್ಯ ಮತ್ತು ಪಾಲನಾ ವಿಭಾಗ ಕಚೇರಿಯಲ್ಲಿ ಆಯೋಜಿಸಲಾಗಿದೆ.

ಸಭೆಯ ಅಧ್ಯಕ್ಷತೆಯನ್ನು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ವೃತ್ತ ಕಚೇರಿಯ ಅಧೀಕ್ಷಕ ಅಭಿಯಂತರರು ವಹಿಸುವರು. ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಇ.ಹೆಚ್​.ಟಿ., ಹೆಚ್​.ಟಿ ವಿದ್ಯುತ್​ ಗ್ರಾಹಕರು ಈ ಸಭೆಗೆ ಹಾಜರಾಗಬೇಕು ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಕೊಪ್ಪಳ ವೃತ್ತ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net