ನಾಳೆ ವಿದ್ಯುತ್​ ವ್ಯತ್ಯಯ

Published on

ಕೊಪ್ಪಳ: ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ 110 ಕೆ.ವಿ ಕೊಪ್ಪಳ ಸ್ಟೇಷನ್​ ಹಾಗೂ 33 ಕೆ.ವಿ ಕಿನ್ನಾಳ ಸ್ಟೇಷನ್​ ನಿರ್ವಹಣೆ ಕಾಮಗಾರಿ ಕಾರಣ ಜೂ.14ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸ್ಟೇಷನ್​ ವ್ತಾಪ್ತಿ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ.

ಎಸ್​.ಜಿ.ಕಾಲೇಜು, ಭಾಗ್ಯನಗರ, ಬನ್ನಿಕಟ್ಟಿ, ಗವಿಮಠ, ಡಿಸಿ ಕಚೇರಿ, ತಾಪಂ ಕಚೇರಿ, ಜಾತ್ರಾ ಫೀಡರ್​, ದೇವಲಾಪುರ, ಕಿನ್ನಾಳ, ಓಜನಳ್ಳಿ, ಕಲಕೇರಿ, ಬುಡಶೆಟ್ನಾಳ, ಯತ್ನಟ್ಟಿ, ಕೊಪ್ಪಳ ಸ್ಟೇಷನ್​ಗೆ ಒಳಪಡುವ ಎಲ್ಲಾ ಐ.ಪಿ ಮತ್ತು ಕೆ.ಡಬ್ಲೂ.ಎಸ್​ 11 ಕೆವಿ ಮತ್ತು 33 ಕೆವಿ ಮಾರ್ಗಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ಎಇಇ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net