ಸಂಭ್ರಮದ ಎಳ್ಳಮಾವಾಸ್ಯೆ ಆಚರಣೆ

distrcit koppal festival celebration ella amavasye
Published on

ಕೊಪ್ಪಳ: ನಗರ ಸೆರಿ ಜಿಲ್ಲಾದ್ಯಂತ ಸೋಮವಾರ ಎಳ್ಳಮಾವಾಸ್ಯೆಯನ್ನು ರೈತರು ಸಡಗರ, ಸಂಭ್ರಮದಿಂದ ಆಚರಿಸಿದರು.

ಗ್ರಾಮೀಣ ಭಾಗದಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಮನೆಯಿಂದ ಎತ್ತಿನ ಬಂಡಿ, ಟ್ರ್ಯಾಕ್ಟರ್​ಗಳಲ್ಲಿ ಹೊಲಗಳಿಗೆ ತೆರಳುವ ದೃಶ್ಯ ಕಂಡುಬಂದವು. ಜಮೀನಿನಲ್ಲಿನ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಹೊಲದಲ್ಲಿ ಚರಗ ಚೆಲ್ಲಿದರು. ಬಳಿಕ ಕುಟುಂಬ ಸಮೇತ ಹಬ್ಬದ ಊಟ ಸವಿದು ದಿನ ಕಳೆದರು. ಗ್ರಾಮೀಣ ಭಾಗದಲ್ಲಿ ಹಿಂಗಾರು ಬೆಳೆಗಳು ಉತ್ತಮವಾಗಿ ಬರಲಿ ಎಂದ ಸದಾಶಯದೊಂದಿಗೆ ಚರಗ ಚೆಲ್ಲುವುದು ವಾಡಿಕೆ. ಕಳೆದ ವರ್ಷ ಬರ ಕಾರಣ ಅಷ್ಟಾಗಿ ಸಂಭ್ರಮ ಇರಲಿಲ್ಲ. ಈ ವರ್ಷ ಉತ್ತಮ ಮಳೆಯಾಗಿದ್ದು, ರೈತಾಪಿ ವರ್ಗದ ಮೊಗದಲ್ಲಿ ಹರ್ಷ ಮೂಡಿಸಿದೆ. ಪರಿಣಾಮ ಹಬ್ಬಾಚರಣೆಯಲ್ಲೂ ಸಂಭ್ರಮ ಕಂಡುಬಂತು.

ಕೊಪ್ಪಳ ನಗರದ ಹೊರವಲಯ, ಸಿಂದೋಗಿ, ಬಿಕನಳ್ಳಿ, ಮೈನಳ್ಳಿ ಸೇರಿ ಇತರ ಭಾಗಗದಲ್ಲಿ ಜನರು ಜಮೀನುಗಳಲ್ಲಿ ದಿನವಿಡಿ ಕುಟುಂಬದವರೊಡನೆ ಸಮಯ ಕಳೆದರು. ಎರಿ ಭಾಗದಲ್ಲಿ ಹೆಚ್ಚಾಗಿ ಹಬ್ಬದ ವೈಭವ ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net