ಗಾಂಜಾ ಮಾರುತ್ತಿದ್ದವ ಅರೆಸ್ಟ್​

Published on

ಕೊಪ್ಪಳ: ತಾಲೂಕಿನ ಬೂದಗುಂಪಾ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡಿ ನಿವಾಸಿ, ಸದ್ಯ ಕೂಕನಪಳ್ಳಿಯಲ್ಲಿ ವಾಸವಾಗಿರುವ ಶ್ರೀನಿವಾಸ ರಾಠೋಡ ಬಂಧಿತ. ಎಚ್​ಪಿ ಪೆಟ್ರೋಲ್​ ಬಂಕ್​ ಬಳಿ ಹಾಳಾದ ಡಾಬಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ. ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಹಿಡಿದಿದ್ದಾರೆ. 25,200 ರೂ. ಮೌಲ್ಯದ 697 ಗ್ರಾಂ ಗಾಂಜಾ ದೊರೆತಿದ್ದು, ಒಂದು ಮೊಬೈಲ್​ ಮತ್ತು ಕಾರ್​ ವಶಕ್ಕೆ ಪಡೆದಿದ್ದಾರೆ. ಆರೋಪಿ ಈಗಾಗಲೇ ಎರಡು ಗಾಂಜಾ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಕೊಪ್ಪಳ ಸೈಬರ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net