

ಕೊಪ್ಪಳ: ಪ್ರಸಕ್ತ ದಿನಗಳಲ್ಲಿ ಆರೋಗ್ಯ ರಕ್ಷಣೆ ಅವಶ್ಯವಿದ್ದು, ಅದರಲ್ಲೂ ಕಣ್ಣಿನ ಆರೋಗ್ಯಕ್ಕೆ ಆದ್ಯತೆ ನೀಡಬೇಕೆಂದು ಡಿಎಚ್ಒ ಡಾ.ಟಿ.ಲಿಂಗರಾಜು ಹೇಳಿದರು.
ನಗರದ ಮೀಡಿಯಾ ಕ್ಲಬ್ನಲ್ಲಿ ಶುಕ್ರವಾರ ಪತ್ರಕರ್ತರಿಗೆ ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜವನ್ನು ಮುನ್ನಡೆಸುವಲ್ಲಿ ಮಾಧ್ಯಮದ ಪಾತ್ರ ಬಹುಮುಖ್ಯ. ಪತ್ರಕರ್ತರು ಸಮಾಜದ ಅಂಕು&ಡೊಂಕುಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಸರಿದಾರಿಗೆ ತರುವ ಕೆಲಸ ಮಾಡುತ್ತಾರೆ. ನಿರಂತರ ಕೆಲಸದ ಒತ್ತಡದ ನಡುವೆ ನಿಮ್ಮ ಆರೋಗ್ಯದ ಕಡೆ ಗಮನ ನೀಡಿದೆ. ದೇಹದಲ್ಲಿನ ಎಲ್ಲ ಅಂಗಗಳೂ ಮುಖ್ಯ. ಕಣ್ಣಿನ ಆರೋಗ್ಯಕ್ಕೆ ಆದ್ಯತೆ ನೀಡಿ. ಅಂಧತ್ವ ನಿವಾರಣಾ ಯೋಜನೆಯಡಿ ಪತ್ರಕರ್ತರ ಕಣ್ಣು ತಪಾಸಣೆ ಹಾಗೂ ಕನ್ನಡಕ ವಿತರಣೆ ಮಾಡಲಾಗಿದೆ ಎಂದರು.
ಜಿಲ್ಲಾ ಅಂಧತ್ವ ನಿವಾರಣಾಧಿಕಾರಿ ಡಾ.ಪ್ರಕಾಶ ಎಚ್. ಮಾತನಾಡಿ, ಸರ್ಕಾರ ಆಶಾಕಿರಣ ಯೋಜನೆಯಡಿ ಅಂಧತ್ವ ನಿವಾರಣ ಕೇಂದ್ರಗಳನ್ನು ರಾಜ್ಯಾದ್ಯಂತ ಆರಂಭಿಸಿದೆ. ಕೊಪ್ಪಳ ಜಿಲ್ಲೆಯ 13 ಕೇಂದ್ರಗಳಿವೆ. ಈ ಮೂಲಕ ನಿತ್ಯ ಕಣ್ಣಿನ ಪರೀೆ, ಅಗತ್ಯವಿದ್ದವರಿಗೆ ಕನ್ನಡಕ ವಿತರಿಸಲಾಗುತ್ತದೆ. ಮಹಿಳೆಯರಲ್ಲಿ ಹೆಚ್ಚಾಗಿ ದೃಷ್ಟಿ ದೋಷ ಕಂಡುಬರುತ್ತದೆ ಎಂದು ತಿಳಿಸಿದರು.
ಎಂ.ಎಂ.ಜೋಶಿ ನೇತ್ರ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಕೊಪ್ಪಳ ವಿಭಾಗದ ವಿಕ್ರಮ್ ಮಾತನಾಡಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ್, ಪತ್ರಕರ್ತರಾದ ರವೀಂದ್ರ ವಿ.ಕೆ., ದತ್ತು ಕಮ್ಮಾರ, ಅನಿಲ ಬಾಚನಳ್ಳಿ, ಸಂತೋಷ ದೇಶಪಾಂಡೆ, ದೊಡ್ಡೇಶ ಎಲಿಗಾರ, ಶ್ರೀಪಾದ ಅಯಾಚಿತ, ಪ್ರಮೋದ ಕುಲಕರ್ಣಿ, ಬಸವರಾಜ ಕರುಗಲ್ ಇತರರಿದ್ದರು.