ಕೊಪ್ಪಳ ಸಮಸ್ಯೆಯನ್ನೂ ಪರಿಹರಿಸಿ

distrcit koppal devanalli farmers strike celbration
Published on

ಕೊಪ್ಪಳ: ದೇವನಳ್ಳಿ ಭೂ ಸ್ವಾಧಿನ ಪ್ರಕ್ರಿಯೆ ರದ್ದುಗೊಂಡ ಹಿನ್ನೆಲೆಯಲ್ಲಿ ನರಗದ ಅಶೋಕ ವೃತ್ತದಲ್ಲಿ ಹೋರಾಟಗಾರರು ಸಿಹಿ ಹಂಚಿ ಸಂಭ್ರಮಿಸಿದರು. ಸಿಎಂ ಸಿದ್ದರಾಮಯ್ಯ ದೇವನಳ್ಳಿ ಮಾದರಿಯಲ್ಲಿ ಎಂಎಸ್​ಪಿಎಲ್​ ಭೂಸ್ವಾಧಿನವನ್ನು ರದ್ದುಗೊಳಿಸಲು ಆಗ್ರಹಿಸಿದರು.

1,198 ದಿನಗಳ ಸುದೀರ್ ಹೋರಾಟ ಬಳಿಕ ಸರ್ಕಾರ, 1,777 ಎಕರೆ ಭೂಸ್ವಾಧಿನ ಪ್ರಕ್ರಿಯೆ ರದ್ದುಗೊಳಿಸಿದೆ. ಸರ್ಕಾರದ ನಡೆ ಸ್ವಾಗತಾರ್ಹ. ಕೊಪ್ಪಳ ಸೇರಿ ರಾಜ್ಯದ ನಾನಾ ಕಡೆಗಳಲ್ಲಿ ಕಾರ್ಖಾನೆ, ಅಭಿವೃದ್ಧಿ ಹೆಸರಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸವನ್ನೂ ಕೈಬಿಡಬೇಕು. ಕೃಷಿ ಭೂಮಿ ಉಳಿಸಬೇಕು. ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಾಪಸ್​ ಪಡೆಯಬೇಕು. ದೇವನಹಳ್ಳಿ ಮಾದರಿಯಲ್ಲಿ ಕೊಪ್ಪಳ ನಗರಕ್ಕೆ ಹೊಂದಿಕೊಂಡು ಮೋಸದಿಂದ ಬಂದಿರುವ ಹೆಸರು ಬದಲಿಸಿಕೊಂಡು ಉರಿಯುತ್ತಿರುವ ಬಲ್ಡೋಟಾದ ಬಿಎಸ್​ಪಿಎಲ್​ ಕಾರ್ಖಾನೆ ಸೇರಿ ಜನರಿಗೆ ಮಾರಕವಾದ ಎಲ್ಲ ಕಂಪನಿಗಳನ್ನು ಕೊಪ್ಪಳ ಬಿಟ್ಟು ತೊಲಗುವಂತೆ ಮಾಡಲು ಆಗ್ರಹಿಸಿದರು. ಆ.4ರಂದು ಸಿಎಂ ಸಿದ್ದರಾಮಯ್ಯ ಜನ್ಮದಿನ. ಅಷ್ಟರೊಳಗೆ ಬಲ್ಡೋಟಾ, ಕಿಲೋರ್ಸ್ಕರ್​ ವಿಸ್ತರಣೆಗೆ ನೀಡಿದ ಅನುಮತಿಯನ್ನು ರದ್ದುಗೊಳಿಸಿ ಆದೇಶಿಸಿದಲ್ಲಿ ಕೊಪ್ಪಳದಲ್ಲಿ ಅವರ ಜನ್ಮ ದಿನ ದೊಡ್ಡಮಟ್ಟದಲ್ಲಿ ಆಚರಿಸಲಾಗುವುದು ಎಂದು ತಿಳಿಸಿದರು.

ಪ್ರಮುಖರಾದ ಬಸವರಾಜ ಶೀಲವಂತರ, ಕೆ.ಬಿ.ಗೋನಾಳ, ಮಹಾಂತೇಶ ಕೊತಬಾಳ, ಶರಣು ಗಡ್ಡಿ, ಭೀಮಸೇನ ಕಲಕೇರಿ, ತಿಪ್ಪಯ್ಯಸ್ವಾಮಿ ಹೊಲಗೇರಿ, ಕನಕಪ್ಪ ಪೂಜಾರ, ಬಂದೇನವಾಜ್​ ಮಣಿಯಾರ, ಗಾಳೆಪ್ಪ ಮುಂಗೋಲಿ, ಕಾಸೀಂ ಸರ್ದಾರ, ನಾಗರಾಜ್​ ಜಿ., ಮಕ್ಬೂಲ್​ ರಾಯಚೂರು, ಪರಶುರಾಮ ವಣಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net