ಯುವಕರು ತಂಬಾಕಿನಿಂದ ದೂರವಿರಿ

distrcit koppal dc naleen athul health department jatha
Published on

ಕೊಪ್ಪಳ: ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಯುವಕರು ತಂಬಾಕು ಸೇವನೆಯಿಂದ ದೂರವಿರಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ತಿಳಿಸಿದರು.

ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ತಂಬಾಕು ಮುಕ್ತ ಯುವ ಅಭಿಯಾನ ಅಂಗವಾಗಿ ಜಾಗೃತಿ ಮೂಡಿಸುವ ಎಲ್​ಇಡಿ ವಾಹನಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.

ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಕುರಿತು ಅರಿವು ಮೂಡಿಸಲಾಗುತ್ತಿದೆ. ತಂಬಾಕಿನಿಂದ ಕ್ಯಾನ್ಸರ್​, ಹೃದಯ ಸಂಬಂಧಿ, ಶ್ವಾಸಕೋಶ ಕಾಯಿಲೆ, ಪಾರ್ಶ್ವವಾಯು ಮತ್ತಿತರ ಕಾಯಿಲೆಗಳು ಬರಬಹುದು. ಆದಷ್ಟು ತಂಬಾಕು ಸೇವನೆಯಿಂದ ದೂರವಿರಿ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು.

ಡಿಎಚ್​ಒ ಡಾ.ಟಿ.ಲಿಂಗರಾಜು ಮಾತನಾಡಿ, ತಂಬಾಕಿನಲ್ಲಿ ನಿಕೋಟಿನ್​ ಎಂಬ ವಿಷಕಾರಿ ಪದಾರ್ಥ ಇರುತ್ತದೆ. 4&7ಸಾವಿರ ರಸಾಯನಿಕಗಳಿರುತ್ತವೆ. ಪ್ರತಿ ವರ್ಷ ವಿಶ್ವದಲ್ಲಿ ತಂಬಾಕಿನಿಂದ ಸಂಭವಿಸುವ ಕಾಯಲೆಗಳಿಂದ ಅನೇಕ ಜನರು ಸಾಯುತ್ತಿದ್ದಾರೆ. ಯುವ ಪೀಳಿಗೆ ತಂಬಾಕಿನ ದಾಸರಾಗುತ್ತಿರುವುದು ದುರಂತ. ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ, ತಂಬಾಕು ನಿಯಂತ್ರಣಾಧಿಕಾರಿ ಶಾಂತಮ್ಮ ಕಟ್ಟಿಮನಿ ಇತರ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net