ವಾರ್ಡ್​ಗಳಿಗೆ ಮೂಲ ಸೌಕರ್ಯ ಕಲ್ಪಿಸಿ

distrcit koppal cmc karave protest basic fecility
Published on

ಕೊಪ್ಪಳ: ನಗರದ ಎಲ್ಲ ವಾರ್ಡ್​ಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಕರವೇ ಕನ್ನಡಪರ ಸಂಟನೆಗಳ ಒಕ್ಕೂಟ ಪದಾಧಿಕಾರಿಗಳು ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ನಗದಲ್ಲಿ ಚರಂಡಿ ಸ್ವಚ್ಛತೆ ಇಲ್ಲ. ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿಲ್ಲ. ಉದ್ಯಾನವಗಳ ಅಭಿವೃದ್ಧಿಯಿಲ್ಲ. ಸಣ್ಣ ಚರಂಡಿಗಳಿದ್ದು, ತುಂಬಿಕೊಂಡು ರಸ್ತೆಗೆ ಹರಿಯುತ್ತಿವೆ. ನಗರದ ಅಂದ ಹಾಳಾಗುತ್ತಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಕಂಡುಬರುತ್ತಿದೆ ಎಂದು ಆರೋಪಿಸಿದರು.

ಕೂಡಲೇ ಎಲ್ಲ ವಾರ್ಡ್​ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ಚರಂಡಿ ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಬೀದಿ ದೀಪ ಸರಿಯಾಗಿ ಅಳವಡಿಸಬೇಕು. ನಗರ ಸೌಂದರ್ಯಕ್ಕೆ ಆದ್ಯತೆ ನೀಡಬೇಕು. ಉದ್ಯಾನಗಳನ್ನು ಅಭಿವೃದ್ಧಿಪಡಿಸಬೇಕು. ಸಮರ್ಪಕವಾಗಿ ಕುಡಿವ ನೀರು ಪೂರೈಸಿ. ಹಾಳಾದ ರಸ್ತೆಗಳನ್ನು ಅಭಿವೃದ್ಧಿಪಡಿಸಿ. ಖಾಲಿ ನಿವೇಶನಗಳಲ್ಲಿ ಮುಳ್ಳು ಕಂಟಿ ಬೆಳೆದಿದ್ದು ತೆರವು ಮಾಡುವಂತೆ ಒತ್ತಾಯಿಸಿದರು. ಸಂಟನೆ ಪದಾಧಿಕಾರಿಗಳಾದ ಬೋರಮ್ಮ ತಳಗಡೆ, ಪ್ರತಿಭಾ, ಸುಧಾ, ಶಾರದಾ, ಕಾಸಿಂಬಿ, ಶಿವರಾಜ ಉಳ್ಳಾಗಡ್ಡಿ, ಗವಿಸಿದ್ದಪ್ಪ ಹಂಡಿ, ನಾಗರಾಜ ಹೊನಕೇರಿ, ಹುಸೇನ್​ಬಾಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net