ಮಕ್ಕಳ ರಕ್ಷಣೆ ಎಲ್ಲರ ಹೊಣೆ

distrcit koppal child protaction child line awareness programme
Published on

ಕೊಪ್ಪಳ: ಮಕ್ಕಳು ದೇಶದ ಆಸ್ತಿ. ಅವರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಜಿಲ್ಲಾ ಮಕ್ಕಳ ಸಹಾಯವಾಣಿ ಸಂಯೋಜಕ ಶರಣಪ್ಪ ಸಿಂಗನಾಳ ಹೇಳಿದರು.

ತಾಲೂಕಿನ ದದೇಗಲ್​ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮಕ್ಕಳ ರಕ್ಷಣಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಭವಿಷ್ಯ ಮಕ್ಕಳು. ಅವರು ಹಕ್ಕುಗಳನ್ನು ಅನುಭವಿಸಲು ನಾವೆಲ್ಲ ಸಹಕರಿಸಬೇಕು. ಉತ್ತಮ ವಾತಾವರಣ ನಿರ್ಮಿಸಬೇಕು. ರಕ್ಷಣೆ ಮಾಡಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿ. ಸರ್ಕಾರದ ಜತೆಗೆ ಸಂ&ಸಂಸ್ಥೆಗಳು ಒಳಗೊಂಡು ಎಲ್ಲರೂ ಕೈ ಜೋಡಿಸಬೇಕು. ವಿಶ್ವಸಂಸ್ಥೆ ಮಕ್ಕಳ ಹಕ್ಕುಗಳ ಒಡಂಬಡಿಕೆ ಜಾರಿಗೆ ತಂದಿದೆ. 1992ರಲ್ಲಿ ಭಾರತವೂ ಒಡಂಬಡಿಕೆಗೆ ಸಹಿ ಹಾಕಿದೆ. ಬಾಲ್ಯವಿವಾಹ ನಿಷೇಧ, ಬಾಲ ಕಾರ್ಮಿಕ ಪದ್ಧತಿ ನಿಮೂರ್ಲನೆ, ಪೋಕ್ಸೋ ಕಾಯ್ದೆ ಬಗ್ಗೆ ಎಲ್ಲರೂ ಅರಿಯಬೇಕು. ಮಕ್ಕಳ ಹಕ್ಕುಗಳಿಗೆ ಧಕ್ಕೆಯಾದಲ್ಲಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ತಿಳಿಸಿದರು.

ಜಿಲ್ಲಾ ಮಿಷಿನ್​ ಸಂಯೋಜಕಿ ಶ್ರೀದೇವಿ ಬಿ. ಮಾತನಾಡಿ, ಮಕ್ಕಳ ರಕ್ಷಣಾ ಟಕ, ಪುನರ್ವಸತಿ, ಸಖಿ ಒನ್​ ಸ್ಟಾಪ್​ ಸೆಂಟರ್​, ಮಕ್ಕಳ ಸಹಾಯವಾಣಿ 1098, ಪೊಲೀಸ್​ ತುರ್ತು ಸಹಾಯವಾಣಿ 112ಬಗ್ಗೆ ವಿವರಿಸಿದರು.

ಪ್ರಾಚಾರ್ಯ ವೀರೇಶ ಕುಮಾರ್​ ಕೆ., ಮಹಿಳಾ ಘಟಕ ಸದಸ್ಯೆ ಅನುಪಮ ಆರ್​.ಟಿ., ನಂದಿನಿ ಬಿ.ಎಂ., ಸುರೇಶ ಬಿ., ಶಶಿಧರ ಪೂಜಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net