ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗಲಿ

distrcit koppal bandiharlapura village girl muerder case protest
Published on

ಕೊಪ್ಪಳ: ತಾಲೂಕಿನ ಹೊಸ ಬಂಡಿಹರ್ಲಾಪುರ ಗ್ರಾಮದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ವಿವಿಧ ಸಂಟನೆಗಳ ಮುಖಂಡರು ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಗ್ರಾಮದ ದಂಪತಿ ಕೆಲಸ ಅರಸಿ ಬೆಂಗಳೂರಿಗೆ ಹೋಗಿದ್ದರು. ಯಶವಂತಪುರ ಕ್ಷೇತ್ರದ ತಾವರಕೆರೆ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರು. ಅವರ ಮಗಳು  ಮನೆಯಲ್ಲಿದ್ದಾಗ ಯಾರೋ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಮುಖ ಜಜ್ಜಿ ಕೊಲೆ ಮಾಡಿದ್ದಾರೆ. ಇದು ಘೋರ ಅನ್ಯಾಯ. ಬಡತನದಲ್ಲಿರುವ ಕುಟುಂಬಕ್ಕೆ ಆಸರೆಯಾಗಿದ್ದ ಬಾಲಕಿ ಕೊಲೆಗೀಡಾಗಿದ್ದು ದು:ಖಕರ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ರಾಜಧಾನಿಯಲ್ಲಿಯೇ ಬಾಲಕಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ಕೂಲಿ ಕೆಲಸ ಅರಸಿ ಬೆಂಗಳೂರಿಗೆ ಹೋಗಲು ಬಡವರು ಭಯಪಡುವಂತಾಗಿದೆ. ಕೂಡಲೇ ಅಪರಾಧಿಗಳಿಗೆ ಕಠಿಣ ಶಿೆ ವಿಧಿಸಬೇಕು. ಗಲ್ಲು ಶಿೆ ನೀಡುವ ಮೂಲಕ ಸಮಾಜಘಾತುಕರಿಗೆ ಎಚ್ಚರಿಕೆ ನೀಡಬೇಕು. ಬಡ ಬಾಲಕಿಯರಿಗೆ ರಕ್ಷಣೆ ನೀಡಬೇಕು. ತನಿಖೆ ಚುರುಕುಗೊಳಿಸಿ ಬೇಗ ತಾರ್ಕಿಕ ಅಂತ್ಯ ಕಾಣಿಸುವಂತೆ ಒತ್ತಾಯಿಸಿದರು.

ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಕೆ.ಬಿ.ಗೋನಾಳ, ಸಂಜಯದಾಸ್​ ಕೌಜಗೇರಿ, ಗಾಳೆಪ್ಪ ಮುಂಗೋಲಿ, ಶಿವಪ್ಪ ಹಡಪದ, ಪರಶುರಾಮ ಕೇರಳ್ಳಿ, ಮಂಜುನಾಥ ದಾಯತ್ಕರ್​, ರಾಮಲಿಂಗಯ್ಯ ಶಾಸ್ತ್ರಿಮಠ, ಸಿದ್ದು ಬೆಳಗಲ, ಗೌರಮ್ಮ ಕೂಡ್ಲಿಗಿ, ಹನುಮಕ್ಕ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net