ವಿಟಮಿನ್​ ಎ ದ್ರಾವಣ ವಿತಣೆ

distrcit koppal bahaddurbandi village govt school
Published on

ಕೊಪ್ಪಳ: ತಾಲೂಕಿನ ಬಹದ್ದೂರಬಂಡಿ ಸರ್ಕಾರಿ ಶಾಲೆಯಲ್ಲಿ 1 ಮತ್ತು 4ನೇ ತರಗತಿ ಮಕ್ಕಳಿಗೆ ಲಸಿಕಾಕರಣ ಮತ್ತು ವಿಟಮಿನ್​ ದ್ರಾವಣ ವಿತರಣೆ ಮಾಡಲಾಯಿತು.

ಮುಖ್ಯ ಶಿಕ್ಷಕ ಬೀರಪ್ಪ ಅಂಡಗಿ ಮಾತನಾಡಿ, ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ವಿಟಮಿನ್​ ಎ ದ್ರಾವಣ ನೀಡಿದರು. ಹುಟ್ಟಿನಿಂದ ರ್ನಿದಿಷ್ಟ ವಯಸ್ಸಿನವರೆಗೆ ವಿವಿಧ ಕಾಯಿಲೆಗಳಿಂದ ರಕ್ಷಣೆ ಪಡೆಯಲು ಸರ್ಕಾರ ಹಂತ ಹಂತವಾಗಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಅಗತ್ಯ ಸಮಯದಲ್ಲಿ ಲಸಿಕೆ ತಪ್ಪದೇ ಪಡೆಯಬೇಕು. ವಿಟಮಿನ್​ ದ್ರಾವಣ ಸೇವಿಸಬೇಕೆಂದು ತಿಳಿಸಿದರು.

ಸಿಆರ್​ಪಿ ಹನುಮಂತಪ್ಪ ಕುರಿ, ಪ್ರಾಥಮಿಕ ಸುರಕ್ಷಾ ಅಧಿಕಾರಿ ಪ್ರಭಾವತಿ, ಸಮೂದಾಯ ಆರೋಗ್ಯ ಅಧಿಕಾರಿ ಗವಿಸಿದ್ದಮ್ಮ, ಶಿಕ್ಷಕರಾದ ಹನುಮಂತಪ್ಪ, ರಾಜಾ ಹುಸೇನ, ಆಶಾ ಕಾರ್ಯಕರ್ತೆಯರಾದ ಮಾಲಂಬಿ, ರತ್ನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net