ಡಿಸ್ಟ್ರಿಲರಿ, ಬ್ರಿವರಿ ಬಾಟ್ಲಿಂಗ್​ ಪರವಾನಗಿ ಶುಲ್ಕವೂ ಹೆಚ್ಚಳ: ಕರಡು ಅಧಿಸೂಚನೆ ಹೊರಡಿಸಿದ ಸರ್ಕಾರ

drinks nw
Published on

ಬೆಂಗಳೂರು:ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೂಢಿಕರಿಸಲು ಬಿಯರ್​, ಇಂಡಿಯನ್​ ಮೇಡ್​ ಲಿಕ್ಕರ್​(ಐಎಂಎಲ್​) ದರ ಏರಿಕೆ ಸೇರಿ ಅಬಕಾರಿ ಪರವಾನಗಿ ನವೀಕರಣ ಶುಲ್ಕವೂ ಹೆಚ್ಚಿಸಿದ ಸರ್ಕಾರ, ಇದೀಗ ಮದ್ಯ ತಯಾರಿಸುವ ಉತ್ಪಾದಕರಿಗೂ ಶಾಕ್​ ಕೊಟ್ಟಿದೆ.

ಹೆಚ್ಚುವರಿ ಸಂಪನ್ಮೂಲ ಕ್ರೋಢಿಕರಣ(ಎಆರ್​ಎಂ) ಸಂಬಂಧ ಜಾರಿಗೆ ತರಲು ವಿವಿಧ ಅಬಕಾರಿ ನಿಯಮಗಳಿಗೆ ತಿದ್ದುಪಡಿ ತರುವ ಉದ್ದೇಶದಿಂದಾಗಿ ಅಬಕಾರಿ ಇಲಾಖೆ, ಇ-ರಾಜ್ಯ ಪತ್ರದಲ್ಲಿ ಕರಡು ಅಧಿಸೂಚನೆ ಪ್ರಕಟಿಸಿದೆ. ಅದರಂತೆ, ಡಿಸ್ಟ್ರಿಲರಿ ಮತ್ತು ಬ್ರಿವರಿ ಬಾಟ್ಲಿಂಗ್​ ಪರವಾನಗಿ ಶುಲ್ಕ(ವರ್ಷಕ್ಕೆ ) 1 ಲಕ್ಷ ರೂ.ನಿಂದ 2 ಲಕ್ಷ ರೂ.ಗೆ., ಬ್ರಿವರಿ(ಉತ್ಪಾದನೆ) ಶುಲ್ಕ 27 ಲಕ್ಷ ರೂ.ನಿಂದ 54 ಲಕ್ಷ ರೂ.ಗೆ ಹೆಚ್ಚಿಸಲು ಇಲಾಖೆ ಮುಂದಾಗಿದೆ. ಇಂಡಿಯನ್​ ಮೇಡ್​ ಲಿಕ್ಕರ್​(ಐಎಂಎಲ್​) ಡಿಸ್ಟ್ರಿಲರಿ ಪರವಾನಗಿ( ಉತ್ಪಾದನೆ) ವಾರ್ಷಿಕ ಶುಲ್ಕ 45 ಲಕ್ಷ ರೂ.ನಿಂದ 90 ಲಕ್ಷ ರೂ.ಗೆ, ರಿಟೇಲ್​ ವೆಂಡ್​ ಆ್​ ಬಲ್ಕ್​ ಬಿಯರ್​ ಸಂಬಂಧಿಸಿದ ಇಂಡಿಪೆಂಡೆಂಟ್​ ಆರ್​ವಿಬಿ ಲೈಸೆನ್ಸ್​ ಶುಲ್ಕ 30 ಸಾವಿರ ರೂ.ನಿಂದ 3 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಕ್ಲಬ್​ (ಸಿಎಲ್​4), ಸ್ಟಾರ್​ ಹೋಟೆಲ್​ (ಸಿಎಲ್​-6ಎ), ಹೋಟೆಲ್​ ಮತ್ತು ವಸತಿ ಗೃಹ (ಸಿಎಲ್​&7),ಬಾರ್​ ಆ್ಯಂಡ್​ ರೆಸ್ಟೋರೆಂಟ್​ (ಸಿಎಲ್​9), ಸಿಎಲ್​-17 ಮತ್ತು ಸಿಎಲ್​-18 ಮದ್ಯದಂಗಡಿಗಳಲ್ಲಿ ಅಟ್ಯಾಚ್ಡ್​ ಆರ್​ವಿಬಿ ಲೈಸೆನ್ಸ್​ ಶುಲ್ಕ 15 ಸಾವಿರ ರೂ.ನಿಂದ 2 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಶುಲ್ಕ ಹೆಚ್ಚಳ ಕುರಿತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಸಹ ಕಲ್ಪಿಸಲಾಗಿದೆ.

40 ಸಾವಿರ ಕೋಟಿ ರೂ.ಗುರಿ: ರಾಜ್ಯದಲ್ಲಿ 12,614 ಮದ್ಯದಂಗಡಿಗಳಿವೆ. ಪ್ರತಿ ನಿತ್ಯ ಮದ್ಯ ಮಾರಾಟದಿಂದಾಗಿ 80&100 ಕೋಟಿ ರೂ.ಇಲಾಖೆ ಮೂಲಕ ಸರ್ಕಾರಕ್ಕೆ ಆದಾಯ ಬರುತ್ತಿದೆ. 2025-26ನೇ ಸಾಲಿನಲ್ಲಿ 40 ಸಾವಿರ ಕೋಟಿ ರೂ. ಆದಾಯ ಸಂಗ್ರಹ ಗುರಿ ನೀಡಲಾಗಿದೆ. ಹೀಗಾಗಿ, ಆದಾಯ ಸಂಗ್ರಹಿಸುವ ಸಲುವಾಗಿ ಅಬಕಾರಿ ನವೀಕರಣ ಶುಲ್ಕವನ್ನು ಪರಿಸ್ಕರಿಸಲಾಗಿದೆ. ಅಲ್ಲದೆ, ಬಿಯರ್​, ಚೀಪ್​ ಲಿಕ್ಕರ್​, ಐಎಂಎಲ್​ ಲಿಕ್ಕರ್​ ದರವನ್ನು ಈಗಾಗಲೇ ಹೆಚ್ಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net