ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ

02GDG01
Published on

ಗದಗ: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲಾ ್ಲಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ ್ಸತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಗದಗ ಹಾಗೂ ಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಇವರುಗಳ ಆಶ್ರಯದಲ್ಲಿ ಗದಗ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಅರುಂಧತಿ ಕುಲಕರ್ಣಿ ಮಾತನಾಡಿ ಸ್ಪರ್ಧೆಯಲ್ಲಿ ಸೋಲು ಗೆಲವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಹೆಚ್.ಐ.ವಿ. ಏಡ್ಸ್ ಸಾಮಾನ್ಯ ಖಾಯಿಲೆಯಾಗಿದ್ದು, ಕೋವಿಡ್‌ನಷ್ಟು ಭಯಾನಕ ಇಲ್ಲ. ಹಾಗೂ ್ನಔಷೊಧಪಚಾರವನ್ನು ತೆಗೆದುಕೊಂಡು ಜೀವನಾವಧಿಯನ್ನು ಹೆಚ್ಚಿಗೆ ಮಾಡಬಹುದು ಎಂದು ತಿಳಿಸಿದರು. ರಕ್ತದಾನದ ಮಹತ್ವವನ್ನು ತಿಳಿಸುತ್ತಾ 18 ವರ್ಷ ತುಂಬಿದವರು, ಹಿಮೋಗ್ಲೋಬಿನ್ ಪ್ರಮಾಣ 12.5 ಮಿ.ಗ್ರಾ ಇರುವವರು ಹಾಗೂ 45 ಕೆ.ಜಿ. ಕ್ಕಿಂತ ಹೆಚ್ಚಿಗೆತೂಕ ಉಳ್ಳವರು, ಯಾರಬೇಕಾದರೂ ರಕ್ತದಾನ ಮಾಡಬಹುದು ಹಾಗೂ ರಕ್ತದಾನ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಹೊಸ ರಕ್ತಉತ್ಪಾದನೆಯಾಗಲು ಪ್ರೇರೆಪಣೆಕೊಡುತ್ತದೆ. ಮತ್ತುಕ್ಯಾನ್ಸರ್ ಮತ್ತು ಹೃದಯದ ಖಾಯಿಲೆಯನ್ನು ತಡೆಗಟ್ಟಬಹುದು ಹಾಗಾಗಿ ಪ್ರತಿಯೊಬ್ಬರೂ ಜೀವನದಲ್ಲಿ ಒಂದು ಬಾರಿಯಾದರೂ ರಕ್ತದಾನ ಮಾಡಿ ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾ. ಎಸ್.ಆರ್. ಗಿಡ್ಡಕೆಂಚೆಣ್ಣವರ ಮಾತನಾಡಿ ಸ್ಪರ್ಧಾಳುಗಳು ಸ್ಪೂರ್ತಿಯಿಂದ ಭಾಗವಹಿಸಿ ಕಾಲೇಜಿಗೆ ಕೀರ್ತಿ ತರಬೇಕೆಂದು ಹೇಳಿದರು. ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ವಿದ್ಯಾರ್ಥಿ ಜೀವನದಲ್ಲಿ ಬರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಗುರಿ ಸಾಧಿಸಲು ಹಾಗೂ ವಿದ್ಯಾರ್ಥಿಗಳು ಆರೋಗ್ಯದಿಂದ ಇರಲು ತಿಳಿಸಿದರು.

ಬಸವರಾಜ ಲಾಲಗಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ರಸಪ್ರಶ್ನೆ ಸ್ಪರ್ಧೆಯ ನಿಯಮಗಳು ಹಾಗೂ ಉದ್ದೇಶಗಳನ್ನು ವಿವರಿಸಿ, ಯುವಜನರಲ್ಲಿ ರಕ್ತದಾನದ ಹಾಗು ಹೆಚ್.ಐ.ವಿ. ಏಡ್ಸ್ ಬಗ್ಗೆ ಅರಿವು ಮೂಡಿಸುವುದು ಈ ರಸಪ್ರಶ್ನೆ ಸ್ಪರ್ಧೆಯ ಉದ್ದೇಶವಾಗಿದ್ದು, ಹೆಚ್.ಐ.ವಿ. ಏಡ್ಸ್ ನಿಯಂತ್ರಣ ಸೇವೆ, ಸೌಲಭ್ಯ, ಕಳಂಕ ಮತ್ತು ತಾರತಮ್ಯ ಹಾಗೂ ರಾಷ್ರೀಯ ಸಹಾಯವಾಣಿ, ಹೆಚ್.ಐ.ವಿ. ಏಡ್ಸ್ಕಾಯ್ದೆ 2017 ಹಾಗೂ ರಕ್ತದಾನದ ಬಗ್ಗೆ ರಸಪ್ರಶ್ನೆ ಒಳಗೊಂಡಿರುತ್ತದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಮೌಲ್ಯಮಾಪಕರಾದ ಡಿ.ಡಿ.ಪಿ.ಐಕಛೇರಿಯ ವಿಷಯ ನೀರಿಕ್ಷಣಾಧಿಕಾರಿಗಳಾದ ಶ್ರೀಮತಿ ಲಲಿತಾ ವಂಕ್ಯಾಳ ಹಾಗೂ ಶ್ರೀಮತಿ ಸರೋಜಾ ಬಂಡಿವಡ್ಡರ ಉಪಸ್ಥಿತರಿದ್ದರು. ಶ್ರೀಮತಿ ಭಾಗ್ಯವತಿ ಪಾಟೀಲ ಧಾಖಲಾತಿ ನಿರ್ವಹಿಸಿದರು. ಸ್ಪರ್ಧೆಯಲ್ಲಿ ಜಿಲ್ಲೆಯ 41 ಪ್ರೌಢಶಾಲೆಯ ತಂಡಗಳು ಭಾಗವಹಿಸಿದ್ದರು. ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮವನ್ನು ಬಸವರಾಜ ಲಾಲಗಟ್ಟಿ ನಿರ್ವಹಿಸಿದರು.

ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನುಸರಕಾರಿ ಪ್ರೌಢಶಾಲೆ ಹೊಳೆಮಣ್ಣೂರ ವಿದ್ಯಾರ್ಥಿನಿಯರಾದ ಕು. ಭುವನೇಶ್ವರ ಆದಿ ಹಾಗೂ ಕು. ಸಂಗೀತಾ ಮುಳ್ಳೂರ, ದ್ವೀತಿಯ ಸ್ಥಾನವನ್ನುಸರಕಾರಿಆದರ್ಶ ವಿದ್ಯಾಲಯಇಟಗಿಯ ಕು. ಸುನೀತಾಕುಸುಗಲ್ ಮತ್ತು ಕು. ಕಾರ್ತಿಕ ಹಿರೇಮಠ, ತೃತೀಯ ಸ್ಥಾನವನ್ನುಪಾರ್ಶ್ವನಾಥ ಪ್ರೌಢಶಾಲೆಯ ಕು. ಶ್ರೇಯಸ್ ಮತ್ತು ಕು. ವಿಕಾಸ, ಹಾಗೂ ಸಮಾಧಾನಕರ ಬಹುಮಾನವನ್ನು ಸೇಂಟ್‌ಜಾನ್ ಪ್ರೌಢಶಾಲೆಯ ಕು. ತೇಜಶ್ವಿನಿ ಮತ್ತು ಕು. ಜೆಸ್ಸಿಕಾ ಪಡೆದುಕೊಂಡರು. ವಿಜೇತರಾದವರಿU ೆಪ್ರಶಸ್ತಿ ಪತ್ರ ಮತ್ತು ಪ್ರಥಮರೂ. 6000, ದ್ವಿತೀಯ ರೂ5000, ತೃತೀಯರೂ. 4000, ಸಮಾಧಾನಕರ 3000 ರೂಪಾಯಿಗಳನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ಪ್ರೌಢಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶ್ರೀಮತಿ ಸರೋಜಾ ಬಿ. ಪ್ರಾರ್ಥಿಸಿದರು. ಶ್ರೀಮತಿ ಚೆನ್ನಮ್ಮಾ ಶ್ಯಾಡಲಗೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net