ಯಾದಗಿರಿ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರಕ್ಕೆ ಅವಶ್ಯವಿರುವ ಹುದ್ದೆಗಳನ್ನು ಗೌರವಧನದ ಆಧಾರದ ಮೇಲೆ ಅರ್ಜಿ ಆಹ್ವಾನ

Published on

ಯಾದಗಿರಿ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಯಾದಗಿರಿ ಜಿಲ್ಲೆಯಲ್ಲಿ ಸ್ವಯಂ ಸೇವಾ ಸಂಸ್ಥೆಯ ಮೂಲಕ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರವನ್ನು ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಮಹಾ ವಿದ್ಯಾಲಯ (ಯಿಮ್ಸ್) ಆವರಣದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದು, ಈ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರಕ್ಕೆ ಅವಶ್ಯವಿರುವ ಹುದ್ದೆಗಳನ್ನು ಗೌರವಧನದ ಆಧಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ್ ಅವರು ತಿಳಿಸಿದ್ದಾರೆ.

ಹುದ್ದೆಗಳು ನೋಡಲ್ ಆಫೀಸರ್ (ಯೂನಿಟ್ ಇನ್‌ಚಾರ್ಜ್) ವಿದ್ಯಾರ್ಹತೆ ಎಂ.ಎಸ್ ಡಬ್ಲೂö್ಯ ಹೊಂದಿರಬೇಕು, ಒಟ್ಟು ಹುದ್ದೆ ಸಂ.1 ಇದೆ. ಅಕೌಂಟೆAಟ್ ಕಂ ಕ್ಲರ್ಕ್ ಕಂ ಸ್ಟೋರ್ ಕೀಪರ್ ವಿದ್ಯಾರ್ಹತೆ ಬಿ.ಕಾಂ ಪದವಿ ಹೊಂದಿರಬೇಕು, ಹುದ್ದೆ ಸಂ.1 ಇದೆ. ಕಂಪ್ಯೂಟರ್ ಆಪರೇಟರ್ ವಿದ್ಯಾರ್ಹತೆ ಪಿ.ಯು.ಸಿ ಕಂಪ್ಯೂಟರ್ ಪ್ರಮಾಣ ಪತ್ರ ಲಗತ್ತಿಸಬೇಕು, ಹುದ್ದೆ ಸಂ.1 ಇದೆ. ಕಚೇರಿ ಸೇವಕ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಹೊಂದಿರಬೇಕು, ಹುದ್ದೆ ಸಂ.1 ಇದೆ. ಕೃತಕಾಂಗ ಜೋಡಣೆ ಅಭಿಯಂತರರು ವಿದ್ಯಾರ್ಹತೆ ಪಿ&ಓ ಇಂಜಿನೀಯರಿAಗ್ ಪದವಿ, ಡಿಪ್ಲೋಮ್ ಜೊತೆಗೆ 2 ರಿಂದ 5 ವರ್ಷಗಳ ಅನುಭವ ಹೊಂದಿರಬೇಕು, ಹುದ್ದೆ ಸಂ.1 ಇದೆ.

ಪ್ರಾಸ್ಥೂಟಿಸ್ಟ್ & ಅರ್ಥೋಟಿಸ್ಟ್ (ಪಿ&ಒ) ವಿದ್ಯಾರ್ಹತೆ ಡಿಪ್ಲೋಮ್ ಇನ್ ಪಿ&ಒ, ಐ.ಟಿ.ಐ (ಫಿಟ್ಟರ್ ಜೊತೆಗೆ ಸಂಬAಧಿಸಿದ ಕ್ಷೇತ್ರದಲ್ಲಿ 2 ವರ್ಷಗಳ ಅನುಭವ ಹೊಂದಿರಬೇಕು, ಹುದ್ದೆ ಸಂ.1 ಇದೆ. ಲೆದರ್ ವರ್ಕರ್, ಶೂ ಮೇಕರ್ ವಿದ್ಯಾರ್ಹತೆ ಸರ್ಟಿಫಿಕೆಟ್ ಇನ್ ಲೆದರ್ ವರ್ಕ್ & ಶೂ ತಯಾರಿಕೆಯಲ್ಲಿ 2 ವರ್ಷಗಳ ಅನುಭವ ಹೊಂದಿರಬೇಕು, ಹುದ್ದೆ ಸಂ.1 ಇದೆ. ಕ್ಲಿನಿಕಲ್ ಸೈಕಾಲಜಿಸ್ಟ್ ವಿದ್ಯಾರ್ಹತೆ ಎಂ.ಎ ಇನ್ ಸೈಕೊಲಾಜಿ ಹೊಂದಿರಬೇಕು, ಹುದ್ದೆ ಸಂ.1 ಇದೆ. ಸ್ಪೀಚ್ ಥೆರಪಿಸ್ಟ್ & ಆಡಿಯೊಲಾಜಿಸ್ಟ್ ವಿದ್ಯಾರ್ಹತೆ ಬಿ.ಎಸ್‌ಸಿ, ಇನ್ ಸ್ಪೀಚ್ & ಆಡಿಯೋಲಾಜಿ ಹೊಂದಿರಬೇಕು, ಹುದ್ದೆ ಸಂ.1 ಇದೆ.

ಫಿಸಿಯೋ ಥೆರಪಿಸ್ಟ್, ಆಕ್ಯುಪೇಷನಲ್ ಥೆರಪಿಸ್ಟ್ ವಿದ್ಯಾರ್ಹತೆ ಫಿಸಿಯೊಥೆರಪಿ, ಆಕ್ಯುಪೇಷನಲ್ ಥೆರಪಿಯಲ್ಲಿ ಪದವಿ ಹೊಂದಿರಬೇಕು, ಹುದ್ದೆ ಸಂ.1 ಇದೆ. ಮೊಬಿಲಿಟಿ ಇನ್ಸ್ಟ್ರಕ್ಟರ್ ವಿದ್ಯಾರ್ಹತೆ ಸರ್ಟಿಫಿಕೆಟ್ ಕೋರ್ಸ್ ಇನ್ & ಎಮ್ ಹೊಂದಿರಬೇಕು, ಹುದ್ದೆ ಸಂ.1 ಇದೆ. ಇಯರ್ ಮೊಲ್ಡ್ ಟೆಕ್ನಿಷಿಯನ್ ವಿದ್ಯಾರ್ಹತೆ ಸರ್ಟಿಫಿಕೆಟ್ ಕೋರ್ಸ್ ಇಯರ್ ಮೊಲ್ಡ್ ಹೊಂದಿರಬೇಕು, ಹುದ್ದೆ ಸಂ.1 ಇದೆ. ಆಸಕ್ತರು ಸ್ವ ವಿವರದೊಂದಿಗೆ 2025ರ ಏಪ್ರಿಲ್ 25ರ ಒಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ : ಜಿಲ್ಲಾಡಳಿತ ಭವನ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕೊಠಡಿ ಸಂಖ್ಯೆ ಬಿ11, ಬಿ12 ನೆಲ ಮಹಡಿ, ಯಾದಗಿರಿ ಇಲ್ಲಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net