ಮಾಗುಂಡಿಯಲ್ಲಿ ವಿದ್ಯಾಗಣಪತಿ ವಿಸರ್ಜನೆ

bhr ganapa
ಬಾಳೆಹೊನ್ನೂರು ಸಮೀಪದ ಮಾಗುಂಡಿಯಲ್ಲಿ ವಿದ್ಯಾಗಣಪತಿ ವಿಸರ್ಜನಾ ಮೆರವಣಿಗೆ ನಡೆಯಿತು.
Published on

ಬಾಳೆಹೊನ್ನೂರು: ಮಾಗುಂಡಿ ಶ್ರೀರಾಮ ಮಂದಿರದ ಆವರಣದಲ್ಲಿ ವಿದ್ಯಾಗಣಪತಿ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ 62ನೇ ವರ್ಷದ ವಿದ್ಯಾಗಣಪತಿ ವಿಸರ್ಜನಾ ಮಹೋತ್ಸವ ಭಾನುವಾರ ಸಂಭ್ರಮದಿಂದ ನಡೆಯಿತು.

ದೇವರಿಗೆ ವಿಶೇಷ ಪೂಜೆ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು. ನಂತರ ವಿದ್ಯಾಗಣಪತಿಯನ್ನು ಅಲಂಕರಿಸಿದ್ದ ಮಂಟಪದಲ್ಲಿ ಪ್ರತಿಷ್ಠಾಪಿಸಿ ಮುಖ್ಯರಸ್ತೆಯಲ್ಲಿ ಆರ್ಕೆಸ್ಟ್ರಾ, ಉಡುಪಿ ಕಡಾರಿಯ ಕೀಲುಕುದುರೆ, ಗೊಂಬೆ ಬಳಗ, ನಾಸಿಕ್ ಡೋಲ್ ಹಾಗೂ ವಿವಿಧ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಿ ಮಲ್ಲಿಕಾರ್ಜುನಸ್ವಾಮಿ ಸನ್ನಿಧಿಯ ಭದ್ರಾನದಿಯಲ್ಲಿ ವಿಸರ್ಜಿಸಲಾಯಿತು.
ಸಮಿತಿ ಅಧ್ಯಕ್ಷ ಎಂ.ಜೆ.ಲಕ್ಷ್ಮಣ್, ಉಪಾಧ್ಯಕ್ಷ ಜಿ.ಕೆ.ಅನುಪ, ಕೆ.ಟಿ.ಸುದೇಶ್, ಎಂ.ಜೆ.ಮೋಹನ್, ಕೆ.ಕೆ.ಸುದರ್ಶನ್, ಡಿ.ರಾಜೇಂದ್ರ, ಎಂ.ಎಸ್.ಸುರೇಂದ್ರ, ಎಂ.ಬಿ.ಪ್ರದೀಪ್, ಎಂ.ಎಸ್.ಅರುಣ್ ಪಟೇಲ್, ಹೊನ್ನಳ್ಳಿ ಪವಿಕುಮಾರ್, ಎಂ.ಕೆ.ಶಬರೀಶ್, ಎಂ.ಕೆ.ಸೃಜನ್, ಶಿಲ್ಪಿ ರಾಮದಾಸ್, ಅರ್ಚಕ ಪ್ರಮೋದ್‌ಭಟ್ ಇತರರಿದ್ದರು.
ಮೇಲ್ಪಾಲ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ವಿದ್ಯಾಗಣಪತಿ ಸೇವಾ ಸಮಿತಿ ಪ್ರತಿಷ್ಠಾಪಿಸಿದ್ದ 46ನೇ ವರ್ಷದ ವಿದ್ಯಾಗಣಪತಿ ವಿಸರ್ಜನಾ ಮಹೋತ್ಸವ ಶನಿವಾರ ನಡೆಯಿತು. ವಿದ್ಯಾಗಣಪತಿಗೆ ವಿಶೇಷ ಪೂಜೆ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಸಿ ವಿದ್ಯಾಗಣಪತಿಯನ್ನು ಪುಷ್ಪಾಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಮುಖ್ಯರಸ್ತೆಯಲ್ಲಿ ಆರ್ಕೆಸ್ಟ್ರಾದೊಂದಿಗೆ ಮೆರವಣಿಗೆ ನಡೆಸಿ ಜಲಸ್ತಂಭನಗೊಳಿಸಲಾಯಿತು. ಸಮಿತಿ ಅಧ್ಯಕ್ಷ ಎಂ.ನಾರಾಯಣ್, ಗೌರವಾಧ್ಯಕ್ಷ ಎಂ.ಕೆ.ಎಂ.ಸದಾನಂದ, ಉಪಾಧ್ಯಕ್ಷ ಎಂ.ಆರ್.ಭಾಸ್ಕರ್, ಪ್ರಧಾನ ಕಾರ್ಯದರ್ಶಿ ಜಿ.ನಟರಾಜ್, ಸಹಕಾರ್ಯದರ್ಶಿ ಜಿ.ಆರ್.ರವಿ. ಖಜಾಂಚಿ ಬಿದ್ದಪ್ಪ, ಕೃಷ್ಣಪ್ಪ , ಅಡ್ಡೋಣಿ ಕೃಷ್ಣಮೂರ್ತಿ, ಕೆ.ಭರತ್, ಗ್ರಾಪಂ ಅಧ್ಯಕ್ಷ ರಾಜೇಶ್, ಎಂ.ಆರ್.ದಿನಕರ್, ತುಪ್ಪೂರು ಮಂಜುನಾಥ್, ಎಂ.ದಯಾನಂದ, ಸುಚಿತಾ ಹೆಗ್ಡೆ, ನಂದಿನಿ, ರಮೇಶ, ವಿಗ್ರಹ ದಾನಿಗಳಾದ ಗಿರಿಜಾ, ಶಾಂತಪ್ಪ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net