ವಿದ್ಯಾಗಣಪತಿ ವಿಸರ್ಜನೆ

Nrp ganesha
ಎನ್.ಆರ್.ಪುರದಲ್ಲಿ ವಿದ್ಯಾಗಣಪತಿ ಸಂಘದಿಂದ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನಾ ಮೆರವಣಿಗೆ ನಡೆಸಲಾಯಿತು.
Published on

ಎನ್.ಆರ್.ಪುರ: ಪಟ್ಟಣದ ವಿದ್ಯಾಗಣಪತಿ ಸಂಘದ ಆಶ್ರಯದಲ್ಲಿ 73ನೇ ವರ್ಷದ ಗಣೇಶೋತ್ಸವ ಅಂಗವಾಗಿ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಅದ್ದೂರಿ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು.

ಗಣೇಶೋತ್ಸವ ಅಂಗವಾಗಿ ಪ್ರತಿನಿತ್ಯ ಸಂಜೆ ಗಣೇಶ ಸನ್ನಿಧಿಯಲ್ಲಿ ವಿವಿಧ ಸಮುದಾಯಗಳಿಂದ ವಿಶೇಷ ಪೂಜೆ ನೆರೆವೇರಿಸಲಾಯಿತು. ಗುರುವಾರ ಗಣಪತಿ ವಿಸರ್ಜನಾ ಮಹೋತ್ಸವ ಅಂಗವಾಗಿ ವಾದ್ಯಗೋಷ್ಠಿ, ಸಿಡಿಮದ್ದು ಪ್ರದರ್ಶನ, ಡಿಜೆ,ನಾಸಿಕ್ ಡೋಲ್ ಮತ್ತಿತರರ ಮನರಂಜನೆಗಳು ಮೆರವಣಿಗೆಯ ಆಕರ್ಷಣೆಯಾಗಿದ್ದವು. ಬದ್ ನಿಲ್ದಾಣದ ಗಣಪತಿ ಪೆಂಡಾಲ್‌ನಿಂದ ಬಸ್ತಿಮಠದವರೆಗೆ ಹಾಗೂ ಪ್ರವಾಸಿ ಮಂದಿರದವರೆಗೆ ಮೆರವಣಿಗೆ ನಡೆಸಿ ಮೆಣಸೂರು ಭದ್ರಾ ಹಿನ್ನೀರಿನಲ್ಲಿ ವಿಸರ್ಜಿಸಲಾಯಿತು.
ವಿದ್ಯಾಗಣಪತಿ ಸಂಘದ ಅಧ್ಯಕ್ಷ ಆರ್.ಕುಮಾರಸ್ವಾಮಿ, ಸಂಘದ ಎಲ್.ಪ್ರಶಾಂತ್ ಶೆಟ್ಟಿ, ಡಿ.ಜಿ.ಕುಮಾರ, ಕೆ.ರಾಜೇಂದ್ರ ರವಿ, ಎಚ್.ಎನ್.ರವಿಶಂಕರ್, ನಾಗಾರ್ಜುನ, ಕಮ್ತಿ ವಾಸಪ್ಪಗೌಡ, ಚಂದ್ರಮೌಳಿ, ಗುರುಶಾಂತಪ್ಪ, ಹಳೇಪೇಟೆ ಕೃಷ್ಣಮೂರ್ತಿ, ಎನ್.ಎಂ.ಕಾರ್ತಿಕ್, ಜಗದೀಶ್, ಬೂರಾರಾಮ್, ಗಿರೀಶ್ ಶೇಠ್, ಶಶಿಧರ್, ರಾಮಜೋಯಿಸ್, ಜಯಂತ್, ಮಂಜು, ವಿಜಿ, ಮಂಜು, ನವೀನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net