ಪಿಳ್ಳಹಳ್ಳಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ

ganesha
Published on

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಪಿಳ್ಳಹಳ್ಳಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ 18 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಅದ್ದೂರಿ ಮೆರವಣಿಗೆ ಮಾಡಿ ವಿಸರ್ಜಿಸಲಾಯಿತು.

ಗ್ರಾಮದಲ್ಲಿನ ಶ್ರೀವಿದ್ಯಾಗಣಪತಿ ಯುವಕ ರೈತ ಸಂಘದಿಂದ ಸುಮಾರು 150 ಮಂದಿ ಯುವಕರು ಪ್ರತಿ ವರ್ಷದಂತೆ ಈ ಬಾರಿಯೂ ಬೃಹತ್ ಗಾತ್ರದ ಅಭಯ ಹಸ್ತ ರೂಪದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದು, ಮಂಗಳ ವಾದ್ಯ, ಡ್ರಮ್ಸ್ ಹಾಗೂ ಕೀಲುಕುದುರೆಯಂತ ಜಾನಪದ ಕಲಾ ತಂಡಗಳೊಂದಿಗೆ ವಿಜೃಂಭಣೆಯ ಮೆರವಣಿಗೆ ಮಾಡಲಾಯಿತು.

ನಂತರ ಗ್ರಾಮದ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದ ಕಾರಣ, ಸುಮಾರು 10 ಅಡಿ ಅಗಲ, 20ಕ್ಕೂ ಹೆಚ್ಚು ಉದ್ದದ ಗುಂಡಿ ತೆಗೆದು ನೀರು ತುಂಬಿದ್ದ ಹೊಂಡದಲ್ಲಿ ಗಣೇಶ ಮೂರ್ತಿಯನ್ನು ಅತ್ಯಾಧುನಿಕ ಪ್ಲೋರ್ ಲಿಫ್ಟ್ ಮೂಲಕ ವಿಸರ್ಜನೆ ಮಾಡಿದ್ದು ವಿಶೇಷವಾಗಿತ್ತು. ಗ್ರಾಮದಲ್ಲಿ 50ನೇ ಗಣೇಶ ಉತ್ಸವ ಇದಾಗಿದೆ.

ವಿದ್ಯುತ್ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ರಾಮಯ್ಯ, ಮಾಜಿ ಉಪಾಧ್ಯಕ್ಷ ಜಿ.ಎನ್.ನಾಗರಾಜು, ಮಾಜಿ ಕಾರ್ಯದರ್ಶಿ ಜಿ.ಮಾರಯ್ಯ, ಯುವಕ ಸಂಘದ ಲೋಕೇಶ್, ರಾಕೇಶ್, ಜಗದೀಶ್, ಸಿದ್ದಪ್ಪ, ದೇವರಾಜು, ಗಂಗರಾಜು, ಮಂಜುನಾಥ್, ನಾರಾಯಣ್ ಸ್ವಾಮಿ, ಕಿಶೋರ್, ಲಕ್ಷ್ಮಣ, ನಾಗರಾಜು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net