ಐದು ಸಹಕಾರಿ ಸಂಘಗಳ ಸಮಾಪನೆ

Co op bank
Published on

ನರಗುಂದ: ಸಮರ್ಪಕವಾಗಿ ಲೆಕ್ಕ ಪರಿಶೋಧನೆ ಕೈಗೊಳ್ಳದ ತಾಲೂಕಿನ 5 ಸಹಕಾರಿ ಸಂಘಗಳನ್ನು ಸ್ಥಗಿತಗೊಳಿಸಲಾಗಿದೆ. ಸಹಕಾರಿ ನಿಬಂಧನೆಗಳನ್ನು ಗಾಳಿಗೆ ತೂರುವ ಸಹಕಾರ ಸಂಘಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರಕಾಶ ನವಲಗುಂದ ಎಚ್ಚರಿಕೆ ನೀಡಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರಗುಂದದ ಮೌನೇಶ್ವರ ಕೋ-ಆಪ್‌ರೇಟಿವ್ ಕ್ರೆಡಿಟ್ ಸೊಸೈಟಿ, ಬಾಬಾಸಾಹೇಬ ಕೋ-ಆಪರೇಟಿವ್ ಸೊಸೈಟಿ, ನರಗುಂದ ಕುರಿಸಂಗೋಪನೆ ಸಹಕಾರಿ ಸಂಘ ಹಾಗೂ ತಾಲೂಕಿನ ಕಪ್ಪಲಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘ, ಶಿರೋಳ ಕೋ ಆಪರೇಟಿವ್ ಸಹಕಾರಿ ಸಂಘಗಳನ್ನು ಎರಡು ವರ್ಷದಿಂದಲೇ ಸ್ಥಗಿತಗೊಳಿಸಲಾಗಿದೆ ಎಂದು ವಿವರ ನೀಡಿದರು.
ಚುನಾವಣೆ: ನರಗುಂದದ ದಿ. ಮಲಪ್ರಭಾ ಕೋ-ಆಪರೇಟಿವ್ ಆಯಿಲ್‌ಮಿಲ್ ಲಿಮಿಟೆಡ್ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗಾಗಿ ಚುನಾವಣೆ ನಿಗದಿಪಡಿಸಲಾಗಿದೆ. ಜೂ. 15, 16ರಂದು ನಾಮಪತ್ರ ಸ್ವೀಕಾರ. 17ರಂದು ನಾಮಪತ್ರ ಪರಿಶೀಲನೆ, 18ರಂದು ನಾಮಪತ್ರ ಹಿಂಪಡೆಯುವುದು. ಅಗತ್ಯ ಬಿದ್ದರೆ ಜೂ.24ರಂದು ಚುನಾವನೆ ನಡೆಯಲಿದೆ. ಚುನಾವಣೆ ಅಧಿಕಾರಿಗಳಾಗಿ ತಹಸೀಲ್ದಾರ ಶ್ರೀಶೈಲ ತಳವಾರ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪ್ರಕಾಶ ಅವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net