

ಹುಬ್ಬಳ್ಳಿ: ಆಲ್ ಇಂಡಿಯಾ ಬಂಜಾರ ಸೇವಾ ಸಂಘದಿಂದ ಇಲ್ಲಿನ ಜೆ.ಸಿ. ನಗರದ ಬಂಜಾರ ಸಮುದಾಯ ಭವನದಲ್ಲಿ 16ನೇ ವರ್ಷದ ದಸರಾ ಉತ್ಸವವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.
ಸಂತ ಸೇವಾಲಾಲ್ ಮಹಾರಾಜರು ಮತ್ತು ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ತೀಜ್ (ಸಸಿ) ವಿಸರ್ಜನೆ ನಡೆಯಿತು. ಸಂಘದ ಅಧ್ಯಕ್ಷ ಪಾಂಡುರಂಗ ಪಮ್ಮಾರ, ಬಂಜಾರ ಭಾಷಾ ಅಕಾಡೆಮಿ ಮಾಜಿ ಅಧ್ಯಕ್ಷ ಕೃಷ್ಣಾಜಿ ಚವ್ಹಾಣ, ಜಿಲ್ಲಾ ಆಯುಷ್ ಅಧಿಕಾರಿ ಬೋಜು ಪೂಜಾರ, ಸುನಂದಾಬಾಯಿ ಲಮಾಣಿ, ಧೀರೇಂದ್ರ ಪಮ್ಮಾರ, ಶ್ರೀಕಾಂತ ಚವ್ಹಾಣ, ಇತರರು ಇದ್ದರು.