ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ, ಶಾಸಕರು, ಹಳೇ ನಾಯಕರ ಬಣದ ಗುದ್ದಾಟ: ಉಸ್ತುವಾರಿ ಸಚಿವರಿಗೆ ತಲೆ ನೋವು

IMG_20250523_201950.jpg
Published on

ಚಿಕ್ಕಬಳ್ಳಾಪುರ: ಸ್ವಪಕ್ಷೀಯ ಪಾಳಯದಲ್ಲಿ ಭಿನ್ನಮತ ಅತಿರೇಕದ ಹಂತವನ್ನು ತಲುಪಿಸಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಪ್ರದಿಪ್ ಈಶ್ವರ್ ಅಯ್ಯರ್ ಬಣ ಹಾಗೂ ಹಳೇ ಕಾಂಗ್ರೆಸ್ ಮುಖಂಡರ ಬಣದ ವಾಗ್ವಾದವು ಜೋರಾಗಿದೆ. ಪರಸ್ಪರ ಬಹಿರಂಗ ಹೇಳಿಕೆಗಳನ್ನು ನೀಡುತ್ತ ಆಕ್ರೋಶ ವ್ಯಕ್ತಪಡಿಸುತ್ತಿದ್ದು ದೂರು ವರಿಷ್ಠರ ಹಂತದವರೆಗೆ ಹೋಗಿದೆ. ಇದಕ್ಕೆ ತಾತ್ಕಾಲಿಕ ತ್ಯಾಪೆ ಹಚ್ಚುವ ಕೆಲಸದಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಬದಲಿಗೆ ಜ್ವಾಲಾಗ್ನಿ ಮತ್ತಷ್ಟು ಹೆಚ್ಚಾಗುತ್ತಿದೆ. ಕಳೆದ ಎರಡು ವರ್ಷಗಳಿಂದಲೂ ಪಕ್ಷ ಸಂಟನೆ ಹಾಗೂ ಹೊಂದಾಣಿಕೆ, ಸರ್ಕಾರದ ಅಭಿವೃದ್ಧಿ ಕೆಲಸಗಳ ನಿರ್ವಹಣೆ ಸೇರಿದಂತೆ ನಾನಾ ನೆಪದಲ್ಲಿ ಬೆಳವಣಿಗೆಗಳನ್ನು ನೋಡಿಕೊಂಡು ಬರುತ್ತಿದ್ದು ಇದೀಗ ಸಮಾಧಾನದ ಮಾತುಗಳಿಂದ ಭಿನ್ನರಾಗ ಮೌನವಾಗುತ್ತಿಲ್ಲ. ಬೀದಿಗೆ ಬಂದಿದ್ದು ನಾನಾ ನೀನಾ ಎನ್ನುವಂತೆ ತೊಡೆ ತಟ್ಟಲಾಗುತ್ತಿದೆ. ಇನ್ನು ಗಂಭೀರ ಆರೋಪ ಪ್ರತ್ಯಾರೋಪಗಳು ಪಕ್ಷದ ಸಂಟನೆಗೆ ಪೆಟ್ಟು ನೀಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net