ಜಿಲ್ಲಾ ವಕ್ಛ್ ಸಮಿತಿಗೆ ಬಿಜೆಪಿಯೇತರ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಅಸಮಾಧಾನ

11b4575d-0c90-4de9-aaa7-27d6096d3838
Published on


ಮಡಿಕೇರಿ: ಜಿಲ್ಲಾ ವಕ್ಛ್ ಸಮಿತಿಗೆ ಆಯ್ಕೆಯಾಗಿರುವ ಬಿಜೆಪಿಯೇತರ ಪಕ್ಷದ ಅಭ್ಯರ್ಥಿಗಳು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಬೇಕು. ಇಲ್ಲದಿದ್ದಲ್ಲಿ ಸಮಿತಿಯ ಸದಸ್ಯತ್ವಕ್ಕೆ ರಾಜಿನಾಮೆ ನೀಡಬೇಕು ಎಂದು ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಘಟಕದ ಸದಸ್ಯ ಸಮೀರ್ ಆಗ್ರಹಿಸಿದರು.


ಬಿಜೆಪಿ ಸರ್ಕಾರ ಮತ್ತು ಮೋದಿಯವರನ್ನು ತೆಗಳುವವರಿಗೆ, ಟೀಕಿಸುವವರಿಗೆ ಜಿಲ್ಲಾ ವಕ್ಛ್ ಸಮಿತಿಯಲ್ಲಿ ೨೧ ಸ್ಥಾನಗಳಲ್ಲಿ ೧೦ ಸ್ಥಾನ ನೀಡಲಾಗಿದೆ. ಇತರ ಪಕ್ಷದ ಸದಸ್ಯರು ಯಾವ ಮುಖವನ್ನಿಟ್ಟು ಸಮಿತಿಯಲ್ಲಿ ಜಾಗವನ್ನು ಪಡೆದುಕೊಂಡಿದ್ದೀರಿ ಎಂದು ಪ್ರಶ್ನಿಸಿರುವ ಅವರು, ನೈತಿಕ ಹೊಣೆಹೊತ್ತು ಇತರೆ ಪಕ್ಷಕ್ಕೆ ರಾಜಿನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಗೊಳ್ಳಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.


ಮಡಿಕೇರಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ನಗರ ಕಾರ್ಯದರ್ಶಿ ಸೈಯದ್ ಯಾಸಿನ್ ಮಾತನಾಡಿ, ವಕ್ಛ್ ಆಸ್ತಿಯನ್ನು ಒತ್ತುವರಿ ಮಾಡಿಕೊಂಡವರಿಗೆ ಸ್ಥಾನ ನೀಡಲಾಗಿದೆ. ಅಲ್ಲದೇ, ಈ ಪ್ರಕರಣದ ವಾದ ನಡೆಯುತ್ತಿದೆ. ಇಂತಹವರನ್ನು ಸಮಿತಿಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.


ಸುದ್ದಿಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎಚ್.ಮುಸ್ತಫ, ಸದಸ್ಯ ಪಿ.ಇ.ಮುಸ್ತಫ, ಜಿಲ್ಲಾ ವಕ್ಛ್ ಸಮಿತಿಯ ನೂತನ ಸದಸ್ಯ ಮಹಮ್ಮದ್ ಹಾಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net