ಜನಸಂಖ್ಯೆ ಅಂಕಿ ಅಂಶಗಳ ವ್ಯತ್ಯಾಸದ ಲೆಕ್ಕಾಚಾರದಲ್ಲಿ ಜಾತಿ ಗಣತಿ ವರದಿ ವಿರುದ್ಧ ಅಸಮಾಧಾನ

IMG-20250414-WA0027.jpg
Published on

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಸಮುದಾಯದ ಜನಸಂಖ್ಯೆ ವಸ್ತುಸ್ಥಿತಿಯ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ. ಇದಕ್ಕೆ ಈಗ ಮಂಡನೆಯಾಗಿರುವ ವೈಜ್ಞಾನಿಕ ಜಾತಿ ಗಣತಿ ವರದಿಯ ಚರ್ಚೆ ಬಳಿಕ ಎಲ್ಲವೂ ಸರಿ ಹೋಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ.ಸುಧಾಕರ್ ವಿಶ್ವಾಸವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 2015 ರಲ್ಲಿ ತಯಾರಾದ ಜಾತಿ ಗಣತಿ ವರದಿಯು ಬಹಿರಂಗಗೊಂಡಿದೆ. ಇದರ ಬಗ್ಗೆ ವ್ಯಾಪಕ ಚರ್ಚೆಯಾಗಬೇಕಾಗಿದೆ. ಸಾಧಕ ಬಾಧಕಗಳಲ್ಲಿ ಸ್ಪಷ್ಟತೆ ಬರಬೇಕು ಎಂದರು.
ಸಚಿವ ಸಂಪುಟದಲ್ಲಿ ಜಾತಿಗಣತಿ ವರದಿಯನ್ನು ಮಂಡಿಸಿದ್ದು ಪ್ರತಿಯೊಬ್ಬ ಸಚಿವರಿಗೂ ಅಧ್ಯಯನಕ್ಕಾಗಿ ತಲಾ 1 ಪ್ರತಿಯನ್ನು ನೀಡಲಾಗಿದೆ. ಹಾಗೆಯೇ ಇದರ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಏ.17 ರಂದು ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ. ಇದರಲ್ಲಿ ಅವರವರ ಸಲಹೆಗಳು ವ್ಯಕ್ತವಾಗಲಿದೆ. ಬಳಿಕ ಸದನದಲ್ಲೂ ವಿಸತ ಚರ್ಚೆಗೂ ಅವಕಾಶ ಇದೆ ಎಂದರು.
ಜಾತಿ ಗಣತಿ ವರದಿಗೆ ಸಂಬಂಧಿಸಿದಂತೆ ಅಧ್ಯಯನದಲ್ಲಿ ತೊಡಗಿದ್ದು ಪೂರ್ಣ ಪ್ರಮಾಣದಲ್ಲಿ ಓದಿಲ್ಲ. ಆದರೂ ವೈಯಕ್ತಿಕವಾಗಿ ಪ್ರಸ್ತುತ ಸಕಾರಾತ್ಮಕವಾಗಿರುವುದರ ಬಗ್ಗೆ ಗೊತ್ತಾಗುತ್ತಿದೆ ಎಂದರು. ಹತ್ತು ವರ್ಷಗಳ ಹಿಂದೆ ನಡೆದ ಗಣತಿ ಹಿನ್ನೆಲೆಯಲ್ಲಿ ಕೇವಲ ಅಂಕಿ ಅಂಶಗಳಲ್ಲಿ ವ್ಯತ್ಯಾಸಗಳಾಗಿರಬಹುದು. ಮೊದಲು ಕರ್ನಾಟಕದಲ್ಲಿ ಐದೂ ವರೆ ಕೋಟಿ ಕನ್ನಡಿಗರು ಇದ್ದಾರೆ ಎನ್ನಲಾಗುತ್ತಿತ್ತು. ಈಗ 7 ಕೋಟಿ ಜನರು ಎಂದೇಳಲಾಗುತ್ತಿದೆ. ಇಂದಿನ ಜನಸಂಖ್ಯೆ ಪ್ರಮಾಣದ ವಾಸ್ತವಾಂಶ ಅಂಕಿ ಅಂಶಗಳನ್ನು ತಿಳಿದುಕೊಳ್ಳುವುದು ಏನು ಕಷ್ಟವಲ್ಲ ಎಂದರು.
ಸಾಮಾನ್ಯವಾಗಿ ಬಹುತೇಕ ಸಮುದಾಯಗಳಿಗೆ ಸ್ವಜಾತಿ ಜನಸಂಖ್ಯೆ ಹೆಚ್ಚಾಗಿದೆ ಎಂಬ ಭಾವನೆಯೇ ಇರುತ್ತದೆ. ಇದಕ್ಕೆ ವರದಿಯಲ್ಲಿನ ಪ್ರಮಾಣವನ್ನು ನೋಡಿದ ಬಳಿ ಕಡಿಮೆ ಎಂಬ ಲೆಕ್ಕಾಚಾರದಲ್ಲಿ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net