ಅಸಮಾಧಾನಿತರೊಂದಿಗೆ ನಡೆದಿದೆ ಮಾತುಕತೆ

28 Dwd 4 Pralhad Joshi
Published on

ಧಾರವಾಡ: ಟಿಕೆಟ್ ಸಿಗದಿರುವವರು ಅಸಮಾಧಾನಗೊಂಡಿದ್ದಾರೆ. ಅಸಮಾಧಾನಿತರ ಜೊತೆ ನಾನು ಹಾಗೂ ವರಿಷ್ಠರು ಮಾತುಕತೆ ನಡೆಸಿದ್ದೇವೆ. ಕೆ.ಎಸ್. ಈಶ್ವರಪ್ಪ ಜೊತೆಗೂ ವರಿಷ್ಠರು ಮಾತನಾಡುತ್ತಿದ್ದಾರೆ. ಅವರು ಬದ್ಧತೆ ಇರುವ ಹಿರಿಯ ನಾಯಕ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ವಿ. ಸದಾನಂದಗೌಡ ಪಕ್ಷ ಬಿಟ್ಟು ಹೋಗುವುದಿಲ್ಲ. ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ನಾನು ಈ ಬಾರಿ ೪ ಲಕ್ಷಕ್ಕೂ ಹೆಚ್ಚಿನ ಮತಗಳಿಂದ ಗೆಲ್ಲುವ ವಿಶ್ವಾಸವಿದೆ. ಕಾಂಗ್ರೆಸ್ ಅಭ್ಯರ್ಥಿ ಇನ್ನೂ ಅಽಕೃತವಾಗಿಲ್ಲ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಹತಾಶರಾಗಿದ್ದಾರೆ. ಮಹದಾಯಿ ಹೋರಾಟಗಾರರು ರಾಜಕೀಯ ನಾಯಕರ ಪ್ರಚಾರಕ್ಕೆ ಬಿಡುವುದಿಲ್ಲ ಎಂದು ಹೇಳಿಲ್ಲ. ವನ್ಯಜೀವಿ ಮಂಡಳಿಯಲ್ಲಿನ ಗೊಂದಲದ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕಿತ್ತು. ಮಹದಾಯಿ ವಿಷಯದಲ್ಲಿ ಕಾಂಗ್ರೆಸ್ ತದ್ವಿರುದ್ಧವಾಗಿ ನಡೆದುಕೊಂಡು ಬಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net