ಒತ್ತಡದ ಬದುಕಿಗೆ ಕಾರಣ ಅತೃಪ್ತಿ

blm (1)
Published on

ಕಾರ್ಕಳ: ಮನುಷ್ಯನಿಗೆ ತೃಪ್ತಿ ಇಲ್ಲದಿರುವುದೇ ದೈನಂದಿನ ಒತ್ತಡದ ಬದುಕಿಗೆ ಕಾರಣ. ಮನುಷ್ಯನು ತನ್ನ ನೆಮ್ಮದಿ ಹದಗೆಟ್ಟಾಗಲಾದರೂ ಸಹನೆ, ಸಂಯಮದಿಂದ ಇರುವುದು ಮುಖ್ಯ. ಇಂತಹ ಗುಣಗಳನ್ನು ವಿದ್ಯಾರ್ಥಿಯಾಗಿದ್ದಾಲೇ ಅಳವಡಿಸಿಕೊಳ್ಳಬೇಕು ಎಂದು ಪಳ್ಳಿ ಸರ್ಕಾರಿ ಪದಪಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಸಂತ ಆಚಾರ್ ಹೇಳಿದರು.

ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಜ್ಞಾನಸುಧಾ ಸಂಸ್ಥೆ ಕಟಿಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಮಾದರಿ ಸಂಸ್ಥೆಯಾಗಿದೆ ಎಂದರು.

ಸತೀಶ್‌ಕುಮಾರ್ ಕೆಮ್ಮಣ್ಣು, ಸುಶೀಲಾ, ಎನ್.ವಿಷ್ಣುಮೂರ್ತಿ ಭಟ್, ಅನುಪಮಾ ಚಿಪ್ಲೂಣ್ಕರ್, ಗ್ರೆಟ್ಟಾ ಸಲ್ಡಾನ್ಹ ಅವರನ್ನು ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಹಾಗೂ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವತಿಯಿಂದ ಗೌರವಿಸಲಾಯಿತು.

ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿಇಒ ದಿನೇಶ್ ಎಂ.ಕೊಡವೂರು, ಉಷಾ ರಾವ್ ಯು., ದೇವೇಂದ್ರ ನಾಯಕ್ ಉಪಸ್ಥಿತರಿದ್ದರು. ಉಪಪ್ರಾಂಶುಪಾಲರಾದ ಸಾಹಿತ್ಯ ಸ್ವಾಗತಿಸಿದರು. ಡಾ.ಪ್ರಜ್ವಲ್ ಕುಲಾಲ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net